ಬೆಳ್ತಂಗಡಿ: ಇಲ್ಲಿನ ಪ್ರಸನ್ನ ಆಂಗ್ಲ ಮಾಧ್ಯಮ ವಸತಿ ಶಾಲೆ ಇದರ 2023-24ನೇ ಶೈಕ್ಷಣಿಕ ಸಾಲಿನ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಜೂ. 24ರಂದು ನೆರವೇರಿತು.
ದೀಪ ಪ್ರಜ್ವಲನ ಮಾಡಿದ ಪ್ರಸನ್ನ ಶಿಕ್ಷಕರ ಶಿಕ್ಷಣ ತರಬೇತಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಶ್ರೀನಿವಾಸ್, ಇವರು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ವಿಕಾಸಕ್ಕೆ ಸಂಘಗಳು ಪೂರಕವಾಗಿವೆ ಎಂದು ಅಭಿಪ್ರಾಯ ಪಟ್ಟರು. ಪ್ರಸ್ತಾವನೆಗೈದ ಪ್ರಸನ್ನ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲರಾದ ಕೆ. ಶಂಕರ್ ನಾರಾಯಣ್ ಭಟ್, ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡವನ್ನು ನಿವಾರಿಸುವಲ್ಲಿ ಸಂಘಗಳು ಕಾರ್ಯಪ್ರವೃತ್ತರಾಗಲಿವೆ ಎಂದರು.
ಶಿಕ್ಷಕಿ ಭಾರತಿ. ಎನ್ ಸ್ವಾಗತಿಸಿದ ಸಭೆಗೆ, ವಿದ್ಯಾರ್ಥಿಗಳಾದ ಅಕ್ಷಾ ಶೆಟ್ಟಿ, ಆಯಿಷಾ, ಸಂಜ್ಞಾ, ನಹ್ಲಾ, ಐಸಿರಿ ಚೇತನ್, ಶಮ್ನಾ ಪ್ರಾರ್ಥಿಸಿ, ಶಿಕ್ಷಕಿ ಜೆರುಶಾ ಪ್ರತಿಜ್ಞಾ ವಿಧಿ ಬೋಧಿಸಿ, ಶಿಕ್ಷಕಿ ಮಿಲನಾ ಕೆ ಧನ್ಯವಾದವಿತ್ತು, ಶಿಕ್ಷಕ , ಅಶ್ವತ್ ಎನ್ ಸಂಘಗಳನ್ನು ರಚಿಸಿ, ಎಂ. ಕೆ ಕನ್ಯಾಡಿ ನಿರೂಪಿಸಿದರು.
ಶಿಕ್ಷಕರುಗಳಾದ ಪ್ರಭಾವತಿ, ಋತ್ವಿಕಾ, ಭಾರತಿ ಎನ್, ಪದ್ಮಲತಾ, ಮಿಲನಾ ಕೆ, ಅನುಪಮಾ, ರೂಪಶ್ರೀ, ಶಿವರಾಮ್ ಕೆ, ಅಶ್ವತ್ ಎನ್ ಸಂಘಗಳ ಯೋಜನೆ ಪ್ರಸ್ತಾಪಿಸಿದರು.