27.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorizedಪ್ರಮುಖ ಸುದ್ದಿವರದಿ

ಶ್ರೀ ಗುರುದೇವಾ ದತ್ತಾಂಜನೆಯ ಭಜನೆ ಸಮಿತಿಯಿಂದ ಸಮಾಜ ಮುಖಿ ಕಾರ್ಯ: ಕರಂಬಾರು ಅಂಗನವಾಡಿ ಕೇಂದ್ರಕ್ಕೆ ನೀರಿನ ಟ್ಯಾಂಕ್ ಹಸ್ತಾಂತರ

ಕರಂಬಾರು ಶ್ರೀ ಗುರುದೇವಾ ದತ್ತಾಂಜನೆಯ ಭಜನೆ ಸಮಿತಿ ಸುಮಾರು 25 ವರ್ಷಗಳಿಂದ ವಿದ್ಯಾ ನಿಧಿ ಪುಸ್ತಕ ವಿತರಣೆ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಹತ್ತು ಹಲವಾರು ಸೇವೆಗಳನ್ನು ಮಾಡುಕೊಂಡು ಬಂದಿರುವಂತ ಸಮಿತಿಯಿಂದ ಕರಂಬಾರು ಅಂಗನವಾಡಿ ಕೇಂದ್ರಕ್ಕೆ ಅಗತ್ಯತೆ ಇರುವ ನೀರಿನ ಟ್ಯಾಂಕ್ ನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಭಜನೆ ಸಮಿತಿಯ ಅಧ್ಯಕ್ಷ ಹರೀಶ್ ಕಲ್ಲಾಜೆ ಮಾತನಾಡಿ ಸುಮಾರು 25 ವರ್ಷಗಳಿಂದ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ಭಜನೆ ಸಮಿತಿ ಇಂದು ಅಗತ್ಯತೆ ಇರುವ ನೀರಿನ ಟ್ಯಾಂಕ್ ಕೊಡುಗೆಯನ್ನು ನೀಡಿರುತ್ತೇವೆ ಮುಂದಿನ ದಿನಗಳಲ್ಲಿ ಈ ಒಂದು ಅಂಗನವಾಡಿ ಕೇಂದ್ರಕ್ಕೆ ಅಭಿವೃದ್ಧಿ ವಿಷಯದಲ್ಲಿ ನಮ್ಮ ಸಂಪೂರ್ಣ ಸಹಕಾರ ಇದೆ ಸಹಕಾರ ನೀಡಿದ ಬಜನೆ ಸಮಿತಿಯ ಸರ್ವ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.

ಈ ಒಂದು ಕಾರ್ಯಕ್ರಮದಲ್ಲಿ ಅಂಗನವಾಡಿ ಅಧ್ಯಕ್ಷೆ ಜಯಶ್ರೀ ಸತೀಶ್ ಪೂಜಾರಿ. ಪಂಚಾಯತ್ ಸದಸ್ಯರಾದ ಪ್ರಕಾಶ್ ಹೆಗ್ಡೆ ಅಂಗನವಾಡಿ ಟೀಚರ್ ಲಾವಣ್ಯ ಭಜನೆ ಸಮಿತಿ ಗೌರವ ಅಧ್ಯಕ್ಷ ಲೋಕೇಶ್ ಕಲ್ಲಾಜೆ ಭಜನೆ ಸಮಿತಿಯ ಪ್ರದಾನ ಕಾರ್ಯದರ್ಶಿ ಯತೀಶ್ ಪೂಜಾರಿ ಸಂಚಾಲಕರಾದ ಅಶೋಕ್ ಟೈಲರ್ ಸಲಹೆ ಸಮಿತಿಯ ಸದಸ್ಯರಾದ ಪ್ರತಪ್ ಪೂಜಾರಿ, ಪ್ರಸಾದ್ ಕುಮಾರ್, ಪದ್ಮನಾಭ ಕುಲಾಲ್ ಬಿಡಿನಬೆಟ್ಟು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Related posts

ಮೊಗ್ರು: ಮುಗೇರಡ್ಕ ಕಿ.ಪ್ರಾ. ಶಾಲೆಯ ಬಿಸಿಯೂಟ ಕೊಠಡಿಗೆ ಬಂದಾರು ಗ್ರಾ.ಪಂ. ವತಿಯಿಂದ ಶೀಟ್ ಅಳವಡಿಕೆ

Suddi Udaya

ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಗೆ ಕರೆ

Suddi Udaya

ಜಮೀಯತುಲ್ ಫಲಾಹ್ ಘಟಕದಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ

Suddi Udaya

ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡಕ್ಕೆ ಸರ್ಕಾರದಿಂದ ರೂ. 9 ಕೋಟಿ ಅನುದಾನ ಮಂಜೂರು; ಸಚಿವರಿಗೆ ಅಭಿನಂದನೆ

Suddi Udaya

ಬೆಳ್ತಂಗಡಿ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ದಿನಾಚರಣೆ

Suddi Udaya

ಬೆಳ್ತಂಗಡಿ ಶಾಂತಿಶ್ರೀ ಮಹಿಳಾ ಸಮಾಜ ವತಿಯಿಂದ ಯಕ್ಷಗಾನ ಶೈಲಿಯ ಕಾವ್ಯವಾಚನ- ಪ್ರವಚನ ವೈಭವದ ಶ್ರೀಜಿನ ಶಾಂತಿನಾಥ ಚರಿತೆ

Suddi Udaya
error: Content is protected !!