25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಗೆ ಕರೆ

ರೆಖ್ಯ: ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆಯು ನ.10 ರಂದು ರೆಖ್ಯ ಗುಡ್ರಾದಿ ಗುಡ್ರಾಮಲ್ಲೇಶ್ವರ ಸಭಾ ವೇದಿಕೆಯಲ್ಲಿ ನೆರವೇರಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಅಶ್ವಿನಿ ನಾಯಕ್, ಈಶ್ವರ ಕೊಠಾರಿ, ಚಂದ್ರ ಮೊಗವೀರ್ ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅಶ್ವಿನಿ ನಾಯಕ್ ಅವರು ಸನಾತನ ಧರ್ಮ ಎದುರಿಸುತ್ತಿರುವ ಸಮಸ್ಯೆಗಳ ಹಾಗೂ ಅದಕ್ಕೆ ಪರಿಹಾರ ವಿಷಯವಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ನ್ಯಾಯವಾದಿ ಈಶ್ವರ ಕೊಠಾರಿ ಅವರು ಹಿಂದೂ ಸಂಘಟನೆಯ ಅವಶ್ಯಕತೆ ವಿಷಯವಾಗಿ ಮಾತನಾಡಿದರು. ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಧಿಕಾರಿ ಚಂದ್ರ ಮೊಗೇರ ರವರು ಹಿಂದೂ ರಾಷ್ಟ್ರದ ಅವಶ್ಯಕತೆ ಕುರಿತು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಹಿಂದುತ್ವಕ್ಕಾಗಿ ಕಾರ್ಯ ನಿರ್ವಹಿಸಿದ ಕೈಕುರೆ ಮಂಜುನಾಥ್ ಗೌಡ ಹಾಗೂ ಎಸ್ ಕೆ ಡಿ ಆರ್ ಡಿ ಪಿ ಪ್ರಾದೇಶಿಕ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯ ಅವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ರೆಖ್ಯ ಹಿಂದೂ ಜನಜಾಗೃತಿ ಸಮಿತಿಯ ಸರ್ವ ಸದಸ್ಯರು, ಗುಡ್ರಾ ಮಲ್ಲೇಶ್ವರ ದೇವಳದ ಅಧ್ಯಕ್ಷ ಮಂಜುನಾಥ್ ಗೌಡ ಕೈಕುರೆ, ಜಯರಾಮ್ ನೆಲ್ಲಿತ್ತಾಯ, ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಉಪಾಧ್ಯಕ್ಷರಾದ ರಾಜು ಸಾಲ್ಯಾನ್, ಶಿಶಿಲ ಗ್ರಾ.ಪಂ ಅಧ್ಯಕ್ಷರಾದ ಸುಧೀನ್.ಡಿ, ಅರಸಿನಮಕ್ಕಿ ಗ್ರಾ.ಪಂ ನಿಕಟ ಪೂರ್ವಧ್ಯಕ್ಷ ನವೀನ್ ರೆಖ್ಯ, ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಂ.ಎಸ್, ಕರುಣಾಕರ ಶಿಶಿಲ, ಗಣೇಶ್.ಕೆ ಹೊಸ್ತೋಟ, ಸಿ ಎ ಬ್ಯಾಂಕ್ ನಿರ್ದೇಶಕರಾದ ಬೇಬಿ ಕಿರಣ್ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಭಾಗವಹಿಸಿದ್ದರು.


ಮಾಧವಿ ಪೈ ಸ್ವಾಗತಿಸಿ ನಿರೂಪಿಸಿದರು, ಶಂಕನಾದವನ್ನು ಶಶಿಧರ್ ಮಾಕಳ ನೆರವೇರಿಸಿದರು, ಕರುಣಾಕರ್ ಅಭ್ಯಂಕರ್ ಅವರು ವೇದ ಮಂತ್ರ ಪಠಣ ಮಾಡಿದರು. ಸಮಿತಿಯ ಪರಿಚಯವನ್ನು ಹರೀಶ್ ಬೆಳಾಲು ನಿರ್ವಹಿಸಿದರು. ಪ್ರಶಾಂತ್ ಏನ್ಮಾಡಿ ವಂದಿಸಿದರು.

Related posts

ಮುಂಗಾರು ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ಬಂಗೇರ ಬಿಗ್ರೇಡ್ ವತಿಯಿಂದ ಶ್ರೀಮತಿ ಬಿನುತಾ ಬಂಗೇರರ ಸಾರಥ್ಯದಲ್ಲಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

Suddi Udaya

ಪಡಂಗಡಿ ಗ್ರಾ.ಪಂ ವ್ಯಾಪ್ತಿಯ ಹಲ್ಲಂದೋಡಿ ಪರಿಸರದಲ್ಲಿ ಸರಕಾರಿ ಭೂಮಿ ಅತಿಕ್ರಮಣ ಆರೋಪ: ನ್ಯಾಯಕ್ಕಾಗಿ ಹಲ್ಲಂದೋಡಿ ಸಂತೋಷ್ ಶೆಟ್ಟಿಯವರಿಂದ ಗ್ರಾಮಕರಣಿಕರ ಕಚೇರಿ ಎದುರು ಧರಣಿ

Suddi Udaya

ಬರೆಂಗಾಯ ನಿಸರ್ಗ ಯುವಜನೇತರ ಮಂಡಲ ಹಾಗೂ ಅರಣ್ಯ ಇಲಾಖೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Suddi Udaya

ಮಾಜಿ ಶಾಸಕ ಕೆ.ವಸಂತ ಬಂಗೇರರ ನಿಧನಕ್ಕೆ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪ ಸಿಂಹ ನಾಯಕ್ ರವರಿಂದ ಸಂತಾಪ

Suddi Udaya

ಬೆಳ್ತಂಗಡಿ ಪೊಲೀಸರಿಂದ ಪುನೀತ್ ಕೆರೆಹಳ್ಳಿ ಬಂಧನ

Suddi Udaya
error: Content is protected !!