ಬೆಳ್ತಂಗಡಿ: ರೆಖ್ಯ ಗ್ರಾಮದ ಎಂಜಿರ-ಕಟ್ಟೆ ಅಂಗನವಾಡಿ ಕೇಂದ್ರದಿಂದ ಗರ್ಭೀಣಿಯರಿಗೆ ವಿತರಣೆಯಾಗಿದ್ದ ಮೊಟ್ಟೆಗಳು ಹಾಳಾಗಿದ್ದು ಇದರಿಂದ ಗ್ರಾಮಸ್ಥರ ಅಕ್ರೋಶ ವ್ಯಕ್ತಪಡಿಸಿದ ಬಗ್ಗೆ ವರದಿಯಾಗಿದೆ.
ಸರಕಾರದಿಂದ ಗರ್ಭಿಣಿಯರಿಗೆ ಅಂಗನವಾಡಿಯ ಮೂಲಕ ವಿತರಣೆಯಾಗುವ ಮೊಟ್ಟೆಗಳು ಎಲ್ಲಾ ಮನೆಗಳಿಗೂ ತಲುಪಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಅಪೌಷ್ಟಿಕತೆ ನೀಗಿಸುವ ಸರ್ಕಾರದ ಉತ್ತಮ ಕಾರ್ಯದಿಂದ ಬೆಳೆಯುವ ಮಕ್ಕಳು ಪೌಷ್ಟಿಕವಾಗಿ ಬೆಳೆಯುತ್ತಾರೆ ಎನ್ನುವ ಉದ್ದೇಶದಿಂದ ವಿತರಣೆ ಹೊಣೆಯು ಅಂಗನವಾಡಿ ಕಾರ್ಯಕರ್ತೆಯರ ಮೇಲಿತ್ತು.
ಸರ್ಕಾರದಿಂದ ಸಿಗಬೇಕಿದ್ದ ಗುಣಮಟ್ಟದ ಮೊಟ್ಟೆ ಇಲ್ಲಿ ಕಳಪೆಯಾಗಿದ್ದು, ಬೇಯಿಸಿದಾಗ ಮೊಟ್ಟೆಯೊಳಗೆ ಹೆಪ್ಪುಗಟ್ಟಿದ ರಕ್ತ. ಅದಾಗಲೇ ಹೊರಬರಬೇಕಿದ್ದ ಮರಿ ಎಲ್ಲವೂ ಬೆಂದು ಹೋಗಿತ್ತು. ಸದ್ಯ ಈ ವಿಚಾರ ಇಡೀ ಗ್ರಾಮದಲ್ಲಿ ಸಂಚರಿಸಿದ್ದು, ಈ ಬಾರಿ ಮೊಟ್ಟೆ ಪಡೆದುಕೊಂಡಿದ್ದ ಪ್ರತೀ ಮನೆಯಲ್ಲೂ ಗುಣಮಟ್ಟ, ಸಂಬಂಧಪಟ್ಟವರ ನಿರ್ಲಕ್ಷ್ಯಕ್ಕೆ ಆಕ್ರೋಶ ಹೊರಬಿತ್ತು.