ನಾರಾವಿ: ಶ್ರೀ ಕ್ಷೇತ್ರ ಧ. ಗ್ರಾ. ಯೋ. ಬಿಸಿ ಟ್ರಸ್ಟ್ ನಿಂದ ಚಿತ್ತಾರ ಕೇಂದ್ರಿಕೃತ ಭತ್ತ ನರ್ಸರಿಗೆ ಚಾಲನೆ

Suddi Udaya

ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ನಾರಾವಿಯಲ್ಲಿ ಚಿತ್ತಾರ ಕೇಂದ್ರೀಕೃತ ಭತ್ತ ನರ್ಸರಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಜಿಲ್ನಾಯ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಅಶೋಕ್ ಕುಮಾರ್ ಜೈನ್ ರವರು ಭತ್ತ ಕೃಷಿಗೆ ನರ್ಸರಿ ತುಂಬಾ ಅವಶ್ಯಕತೆ ಇದ್ದು ನಮ್ಮ ಭಾಗದಲ್ಲಿ ಯಾಂತ್ರಿಕೃತ ವಾಗಿ ಭತ್ತ ಬೇಸಾಯ ಮಾಡಲು ರೈತರಿಗೆ ತುಂಬಾ ಅನುಕೂಲವಾಗಿದೆ ಕಡಿಮೆ ಖರ್ಚಲ್ಲಿ ಪ್ರಶಾಂತ್ ರವರು ನರ್ಸರಿ ಮಾಡಿಕೊಡುತ್ತಿರುವುದು ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ನುಡಿದರು.


ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಮೇಲ್ವಿಚಾರಕರಾದ ಕೃಷ್ಣರವರು ಮುಂಗಾರು ಹಾಗೂ ಹಿಂಗಾರು ಭತ್ತ ಬೇಸಾಯಕ್ಕೆ ಸಸಿ ಮಡಿ ತಯಾರಿಸಲು ಪ್ರಶಾಂತ್ ಚಿತ್ತಾರ್ ರವರಿಗೆ ಯೋಜನೆ ವತಿಯಿಂದ ತರಬೇತಿಯನ್ನು ನೀಡಲಾಗಿದೆ. 10000 ಸಸಿ ಮಡಿಗೆ ಬೇಕಾಗಿರುವ ಮಣ್ಣು ಸಂಗ್ರಹಣೆ ಮಾಡಲಾಗಿದೆ ಟ್ರೇ ಗಳನ್ನು ಸಿ.ಎಚ್.ಎಸ್.ಸಿ ಕೇಂದ್ರ ದಿಂದ ಪಡೆಯಲಾಗಿದ್ದು ಒಂದು ಎಕ್ರೆ ಗೆ 70ರಿಂದ 80 ಸಸಿ ಮಡಿ ಬೇಕಾಗಿದ್ದು ಪ್ರಶಾಂತ್ ರವರು ಒಂದು ಸಸಿ ಮಡಿಗೆ ತಯಾರಿಸಿ ಕೊಡಲು 50 ರಿಂದ 60 rs ಪಡೆದು ತಯಾರಿ ಮಾಡಿ ಕೊಡುತ್ತಾರೆ ಈಗಾಗಲೇ 1000 ಸಸಿ ಮಡಿಗೆ ಬೇಡಿಕೆ ಬಂದಿದ್ದು ಎಲ್ಲಾ ರೈತರು ನರ್ಸರಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.


ಸಿ.ಎಚ್.ಎಸ್.ಸಿ ಬೆಳ್ತಂಗಡಿ ಮೆನೇಜರ್ ಸಚಿನ್ ಕುಮಾರ್ ಮಾತನಾಡಿ ಯಾಂತ್ರಿಕ್ರತ ಭತ್ತ ಬೇಸಾಯಕ್ಕೆ ನಮ್ಮಲ್ಲಿ ರೈಡಾನ್ ಹಾಗೂ ವಾಕ್ ಬಿಯಾಂಡ್ ನಾಟಿ ಮಷಿನ್ ಹಾಗೂ ಉಳುಮೆಗೆ ಬೇಕಾದ ಟ್ರ್ಯಾಕ್ಟರ್ ಕಡಿಮೆ ಬಾಡಿಗೆಗೆ ಸಿಗುವುದಾಗಿ ಮಾತನಾಡಿದರು. ವಲಯ ಅಧ್ಯಕ್ಷ ಅಶೋಕ್ ಎಮ್.ಕೆ, ನಾರಾವಿ ಸಿ.ಎಚ್.ಎಸ್.ಸಿ ಮೆನೇಜರ್ ಸಚಿನ್, ಪ್ರಗತಿಪರ ರೈತರಾದ ರವಿ ರಾಮ ಭಟ್, ಹರೀಶ್, ಗಂಗಾಧರ ಗೌಡ, ರಾಜು ಪೂಜಾರಿ, ಸುಧಾಕರ ಬೊಲ್ಲೊಟ್ಟು, ಅಣ್ಣಿ ಸಾಲಿಯಾನ್, ಸೇವಾಪ್ರತಿನಿಧಿ ಶುಭ ಹಾಗೂ ಸ್ಥಳೀಯ ರೈತರು, ಊರಿನ ಗಣ್ಯರು ಉಪಸ್ಥಿತರಿದ್ದರು.

Leave a Comment

error: Content is protected !!