ಮುಂಡಾಜೆ: ಮುಂಡಾಜೆಯ ವಿವೇಕಾನಂದ ಶಿಕ್ಷಣ ಸಂಸ್ಥೆ ಹಾಗೂ ಗ್ರಾಮ ವಿಕಾಸ ಸಮಿತಿ ಇದರ ಜಂಟಿ ನೇತೃತ್ವದಲ್ಲಿ ವಿವೇಕ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ಮುಂಡಾಜೆ ಯುವಕ ಮಂಡಲದ ವಠಾರದಲ್ಲಿ ವೈವಿಧ್ಯಮಯ ಔಷಧೀಯ ಗಿಡಗಳನ್ನು ನೆಟ್ಟು ಮೂಲಿಕಾ ವನವನ್ನು ನಿರ್ಮಿಸಲಾಯಿತು.ಈ ಸಂದರ್ಭದಲ್ಲಿ ನಾರಾಯಣ ಫಡಕೆ, ಬಾಬು ಪೂಜಾರಿ ಸಚಿನ್ ಭಿಡೆ,ಸಂದೀಪ್ ಶೆಟ್ಟಿ,ಆನಂದ ಜಿ, ವಿಶ್ವನಾಥ ಶೆಟ್ಟಿ, ಸುಭಾಶ್ಚಂದ್ರ ಜೈನ್,ವಿವೇಕಾನಂದ ಶಿಕ್ಷಣ ಸಂಸ್ಥೆಯ ಶಿಕ್ಷಕರು ಹಾಗು ವಿದ್ಯಾರ್ಥಿಗಳು ,ಗ್ರಾಮ ವಿಕಾಸ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
