ಕೊಕ್ಕಡ: ಕಳೆದ 39 ವರ್ಷಗಳ ಸುದೀರ್ಘ ಸೇವೆಯಿಂದ ಕೌಕ್ರಾಡಿ ಸಂತ ಜಾನರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜೆಸಿಂತಾ ಡಿ ಸೋಜರವರು ಜೂ. 30 ರಂದು ವಯೋ ನಿವೃತ್ತಿ ಹೊಂದಲಿದ್ದಾರೆ.
ಇವರು ಮಂಗಳೂರು ಸೈಂಟ್ ಆನ್ಸ್ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಟಿ.ಸಿ. ಹೆಚ್. ಶಿಕ್ಷಣ ಪಡೆದು ಬಳಿಕ ಮಡಂತ್ಯಾರು ಗಾರ್ಡಿಯನ್ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದು ವರ್ಷಗಳ ಕಾಲ ಸಹ ಶಿಕ್ಷಕಿಯಾಗಿ, ನಂತರ ಕೌಕ್ರಾಡಿ ಸಂತ ಜಾನರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಕೊಕ್ಕಡ ಚರ್ಚ್ ಪಾಲನಾ ಸಮಿತಿಯ ಸದಸ್ಯರಾಗಿ, ಸ್ಕೌಟ್ಸ್ ಗೈಡ್ಸ್ ಶಿಕ್ಷಕಿಯಾಗಿ, ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ಸದಸ್ಯರಾಗಿ ಉತ್ತಮ ಸಮಾಜ ಸೇವೆಯನ್ನು ಸಲ್ಲಿಸಿದ್ದಾರೆ.
ಗುಣಮಟ್ಟದ ಶಿಕ್ಷಣ, ಬಡ, ದುರ್ಬಲ ವರ್ಗದ ವಿದ್ಯಾರ್ಥಿಗಳು ಹಾಗೂ ಬಡಬಗ್ಗರಿಗೆ ಕೊಡುಗೈ ದಾನಿಯಾಗಿ
ಪರಿಸರದಲ್ಲಿ ತುಂಬಾ ಜನಪ್ರಿಯ ಶಿಕ್ಷಕಿ ಆಗಿರುತ್ತಾರೆ. ಉತ್ತಮ ಸೇವೆಯನ್ನು ಗುರುತಿಸಿ ಜೆಸಿಂತಾ ಡಿ ಸೋಜ ಇವರಿಗೆ ಹಲವಾರು ಸಂಸ್ಥೆಗಳು ಗೌರವಿಸಿವೆ. ಭಾರತೀಯ ಜೇಸಿ ಸಂಸ್ಥೆಯ ಹೆಚ್. ಜಿ. ಎಫ್. ಎಂಬ ಪುರಸ್ಕಾರ ಲಭಿಸಿದೆ.
ಇವರು ಪ್ರಸ್ತುತ ಕೊಕ್ಕಡ ಗ್ರಾಮದ ಜೋಡುಮಾರ್ಗ ನಿವಾಸಿಯಾಗಿದ್ದು. ಪತಿಯು ಜೋಸೆಫ್ ಪಿರೇರಾ ರವರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.
ಮಡಂತ್ಯಾರು ಬಳಿಯ ಮಾಲಾಡಿ ಎಂಬಲ್ಲಿ ದಿ. ಜೋನ್ ಡಿ ಸೋಜ ಹಾಗೂ ಶ್ರೀಮತಿ ಪೌಲಿನ್ ಫೆರ್ನಾಂಡಿಸ್ ರವರ ಪುತ್ರಿ.