September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಣ್ಣೀರುಪಂತ ಹಾ.ಉ. ಸ. ಸಂಘದ ಅಧ್ಯಕ್ಷರಾಗಿ ಬಿ. ನಿರಂಜನ್ ಮತ್ತು ಉಪಾಧ್ಯಕ್ಷರಾಗಿ ಪಿ. ಜಯರಾಜ್ ಹೆಗ್ಡೆ ಆಯ್ಕೆ

ತಣ್ಣೀರುಪಂತ : ಕಲ್ಲೇರಿ ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷದ ಅವಧಿಗೆ ಜೂ.24 ರಂದು ಚುನಾವಣೆ ನಿಗದಿಯಾಗಿದ್ದು ಒಟ್ಟು ಎಲ್ಲಾ 13 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು ಆಡಳಿತ ಮಂಡಳಿಯ ಸಭೆಯಲ್ಲಿ ಅಧ್ಯಕ್ಷರಾಗಿ ಬಿ. ನಿರಂಜನ್ ಮತ್ತು ಉಪಾಧ್ಯಕ್ಷರಾಗಿ ಪಿ. ಜಯರಾಜ್ ಹೆಗ್ಡೆ ಜೂ.28 ರಂದು ಆಯ್ಕೆಯಾದರು.

ನಿರ್ದೇಶಕರು ಸಾಮಾನ್ಯ 7 ಸ್ಥಾನಕ್ಕೆ ಬಿ. ನಿರಂಜನ್, ಪಿ. ಜಯರಾಜ್ ಹೆಗ್ಡೆ, ಜಾನ್ ಫೆಲಿಕ್ಸ್ ಲೋಬೊ, ಎನ್. ಪ್ರಸನ್ನ, ಜನಾರ್ಧನ ಗೌಡ, ವಜ್ರ ಕುಮಾರ್, ಕೃಷ್ಣಪ್ಪ ಪೂಜಾರಿ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿ. ಶೂರ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಚೋಮ ನಾಯ್ಕ್, ಹಿಂದುಳಿದ ವರ್ಗ ಎ. ವರ್ಗದಿಂದ ತಿಮ್ಮಪ್ಪ ಸಾಲಿಯಾನ್,, ಹಿಂದುಳಿದ ವರ್ಗ ಬಿ. ವರ್ಗದಿಂದ ಪಿ. ದಿನೇಶ್ ಗೌಡ, 2 ಸ್ಥಾನ ಮಹಿಳಾ ಮೀಸಲು ಕ್ಷೇತ್ರದಿಂದ ಹಾಜಿರಾ, ಕೆ. ಪುಷ್ಪ ಇವರು ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಸುಳ್ಯ ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ. ನಿರ್ವಹಿಸಿದರು. ಕಾರ್ಯದರ್ಶಿ ಜಯರಾಜ್ ಜೈನ್ ಮತ್ತು ಸಿಬ್ಬಂದಿಗಳು ಸಹಕರಿಸಿದರು.

Related posts

ಜಾರಿಗೆಬೈಲಿನಲ್ಲಿ ಕೆ.ಎಮ್.ಜೆ. ವತಿಯಿಂದ “ಪ್ರಜಾ ಭಾರತ” ಸೌಹಾರ್ಧ ಕಾರ್ಯಕ್ರಮ

Suddi Udaya

ಆರಂಬೋಡಿ ಒಕ್ಕೂಟದವರಿಂದ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ

Suddi Udaya

ಸಾಯಿ ರಾಮ್ ಫ್ರೆಂಡ್ಸ್ ಗುರುವಾಯನಕೆರೆ ವತಿಯಿಂದ ಸುಹಾಸ್ ಶೆಟ್ಟಿಗೆ ನುಡಿ ನಮನ

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ಸೇಕ್ರೆಡ್ ಹಾರ್ಟ್ ವಾಳೆಯಲ್ಲಿ ಮನೆ ಹಸ್ತಾಂತರ

Suddi Udaya

ಬಳ್ಳಮಂಜ ಕ್ಷೇತ್ರದ ಶ್ರೀ ಈಶ್ವರ ದೇವರ ಗರ್ಭಗುಡಿಯ ಪಾದುಕನ್ಯಾಸ

Suddi Udaya

ಕಣಿಯೂರು ದೀಪಾ ಸಂಜೀವಿನಿ ಒಕ್ಕೂಟದ ಮಹಾಸಭೆ

Suddi Udaya
error: Content is protected !!