32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಜು.3: ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ

ಬೆಳ್ತಂಗಡಿ: ಹಿಂದೂ ಜನಜಾಗೃತಿ ಸಮಿತ ಯಿಂದ ಗುರುಪೂರ್ಣಿಮಾ ಮಹೋತ್ಸವವು ಜು.3ರಂದು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಕೃಷ್ಣಾನುಗ್ರಹ ಸಭಾಭವನದಲ್ಲಿ ಸಂಜೆ 4.30 ಗಂಟೆಗೆ ನಡೆಯಲಿದೆ.

ಜಗದ್ಗುರು ಭಗವಾನ್ ಶ್ರೀಕೃಷ್ಣನು ಶಿಷ್ಯ ಅರ್ಜುನನಿಗೆ ಅಮೂಲ್ಯ ಮಾರ್ಗದರ್ಶನ ಮಾಡಿ, ದ್ವಾಪರಯುಗದಲ್ಲಿ ಧರ್ಮ- ಸಂಸ್ಥಾಪನೆಯನ್ನು ಮಾಡಿದನು. ಅದೇ ರೀತಿ ಕಲಿಯುಗದಲ್ಲಿ ನಾವೂ ಸಹ ಗುರುಗಳ ಮಾರ್ಗದರ್ಶನಕ್ಕನುಸಾರ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ. ಗುರುಗಳ ಕೃಪೆಯನ್ನು ಸಂಪಾದಿಸಲು ಗುರುಗಳ, ಧರ್ಮಸಂಸ್ಥಾಪನೆಯ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ನಾವೂ ಮಾಡಬೇಕು. ಇದರ ವಿಷಯದಲ್ಲಿ ವಿವರವಾದ ವಿವೇಚನೆ ಮಾಡಬೇಕೆಂದು, ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಸ್ವರೂಪ: ಶ್ರೀ ವ್ಯಾಸಪೂಜೆ, ಶ್ರೀ ಗುರುಗಳ ಪ್ರತಿಮೆಯ ಪೂಜೆ, ಹಿಂದೂ ಜನಜಾಗೃತಿ ಸಮಿತಿಯ ಸ್ವರಕ್ಷಣಾ ತರಬೇತಿ ವರ್ಗದಲ್ಲಿನ ಯುವಕರಿಂದ ಉಪಯುಕ್ತ ಪ್ರಾತ್ಯಕ್ಷಿಕೆಗಳು, ಸಾತ್ವಿಕ ಗ್ರಂಥ ಮತ್ತು ಉತ್ಪನ್ನಗಳ ಪ್ರದರ್ಶನ

ಕಿರುಚಿತ್ರ, ಹಾಗೆಯೇ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸುವ ಫಲಕಗಳ ಪ್ರದರ್ಶನ, ಸಮಾಜ, ರಾಷ್ಟ್ರ ಮತ್ತು ಧರ್ಮದ ಬಗ್ಗೆ ಸಮಾಜದಲ್ಲಿನ ಗಣ್ಯರ ಅಮೂಲ್ಯ ವಿಚಾರ.

Related posts

ಎಸೆಸೆಲ್ಸಿ ಫಲಿತಾಂಶ ಪ್ರಕಟ- ಈ ಬಾರಿಯೂ ಬಾಲಕಿಯರೇ ಮೇಲುಗೈ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ

Suddi Udaya

ಚೆಸ್ ಪಂದ್ಯಾಟ: ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ವರ್ತಕರ ಸಂಘ ಹಾಗೂ ಬೆಳ್ತಂಗಡಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ವತಿಯಿಂದ ಸ್ವಾತಂತ್ರ ದಿನಾಚರಣೆ

Suddi Udaya

ಅಳದಂಗಡಿಯಲ್ಲಿ ನೊಚ್ಚ ಹಾರ್ಡ್‌ವೇರ್ ಮತ್ತು ಸ್ಯಾನಿಟರಿ ಶುಭಾರಂಭ

Suddi Udaya

ಲಾಯಿಲ ಮಹಾ ಶಕ್ತಿ ಕೇಂದ್ರದ ಕಡಿರುದ್ಯಾವರ ಗ್ರಾಮದಲ್ಲಿ ಯುವ ಚೌಪಾಲ್

Suddi Udaya
error: Content is protected !!