24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ -ಸ್ಪೆಷಾಲಿಟಿ ಆಸ್ಪತ್ರೆ ದಶಮಾನೋತ್ಸವ ಸಂಭ್ರಮಾಚರಣೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ -ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಇದರ 10ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಜೂ.30 ರಂದು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭ ಹಿರಿಯ ಸಿಬ್ಬಂದಿಗಳಾದ ಡಾ| ಬಾಲಕೃಷ್ಣ ಭಟ್, ಡಾ| ಕಮಲಾ ಭಟ್, ನಸಿಂಗ್ ಸೂಪರಿಡೆಂಟ್ ಶರ್ಲಿ ಇವರನ್ನು ಗೌರವಿಸಲಾಯಿತು. ಆಸ್ಪತ್ರೆ ಪ್ರಾರಂಭದಿಂದ ಸೇವಾ ಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ಸ್ಮರಣಿಕ ನೀಡಿ ಗುರುತಿಸಲಾಯಿತು.

ಕಾರ್‍ಯಕ್ರಮದಲ್ಲಿ ನಿವೃತ್ತ ಆಡಳಿತ ನಿರ್ದೇಶಕ ಮನ್ಮಥ್ ಕುಮಾರ್, ಮೆಡಿಕಲ್ ಟ್ರಸ್ಟ್ ಕಾರ್‍ಯದರ್ಶಿ ಶಿಶು ಪಾಲ ಜೈನ್ , ಇವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಹೇಮಾವತಿ ವಿ. ಹೆಗ್ಗಡೆ, ಶಾಂತಿವನ ಟ್ರಸ್ಟ್ ನ ನಿರ್ದೇಶಕ ಡಿ ಹರ್ಷೇಂದ್ರ ಕುಮಾರ್, ನಿವೃತ್ತ ಆಡಳಿತ ನಿರ್ದೇಶಕ ಮನ್ಮಥ್ ಕುಮಾರ್, ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಜೈನ್, ಪೂರಣ್ ವರ್ಮ , ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್, ಮೆಡಿಕಲ್ ಸೂಪರಿಟೆಂಡೆಂಟ್, ದೇವೇಂದ್ರ ಕುಮಾರ್ ಉಪಸ್ಥಿತರಿದ್ದರು.

ಕು| ನೇತ್ರಾ ಮತ್ತು ತಂಡದವರ ಪ್ರಾರ್ಥನೆ ಬಳಿಕ ನಿರ್ದೇಶಕ ಜನಾರ್ದನ ಸ್ವಾಗತಿಸಿದರು. ಜಗನ್ನಾಥ ಮತ್ತು ಮೀರಾ ಅನುಪಮ ಕಾಯ೯ಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ನ್ಯಾಯವಾದಿ ಭಗೀರಥ ಜಿ ರವರ ನೋಟರಿ ಕಚೇರಿಯು ಸ್ಥಳಾಂತರಗೊಂಡು ಶುಭಾರಂಭ

Suddi Udaya

ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಹಿರಿಯ ಪಶುಪರೀಕ್ಷಕ ರಮೇಶ್ ಅಳದಂಗಡಿ ನೇಮಕ

Suddi Udaya

ಯಕ್ಷ ಭಾರತಿ ಕನ್ಯಾಡಿ ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ: ಪವರ್ ಆನ್‌ನಲ್ಲಿ ದೀಪಾವಳಿ ಹಬ್ಬಗಳ ಪ್ರಯುಕ್ತ ಮೆಗಾ ಸೇಲ್: ಪ್ರತಿ ಖರೀದಿಯ ಮೇಲೆ ಶೇ.10ರಿಂದ 50 ರಷ್ಟು ರಿಯಾಯಿತಿ

Suddi Udaya

ಜ.25: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಪಿ.ಯು.ಶಿಕ್ಷಣ : ಭವಿಷ್ಯದ ಅವಕಾಶಗಳ ಕುರಿತು ಮಾರ್ಗದರ್ಶನ ಕಾರ್ಯಕ್ರಮವು

Suddi Udaya
error: Content is protected !!