ಬೆಳ್ತಂಗಡಿ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ 2022-23 ಸಾಲಿನ ಮಹಾಸಭೆಯು ಜೂ. 30 ರಂದು ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ 2022 – 23ನೇ ಸಾಲಿನ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ರವಿಕುಮಾರ್ ಲೆಕ್ಕಪತ್ರವನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರೂಪಾಕ್ಷಪ್ಪ ರಾಜ್ಯ ಸಂಸ್ಥೆಯಿಂದ ನೀಡಲ್ಪಟ್ಟಂತಹ ಯೋಜನಾ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಜಿಲ್ಲಾ ಸಂಸ್ಥೆಯಿಂದ ಜಿಲ್ಲಾ ಕಾರ್ಯದರ್ಶಿಯಾದ ಎಂಜಿ ಕಜೆ ಜಿಲ್ಲಾ ಸ್ಕೌಟ್ ಆಯುಕ್ರಾದ ರಾಮಶೇಷ ಶೆಟ್ಟಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ , ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಚ್ ಪದ್ಮಕುಮಾರ್ ನಿಕಟ ಪೂರ್ವ ಅಧ್ಯಕ್ಷರಾದ ವಿಠಲ್ ಶೆಟ್ಟಿ, ಕೋಶಾಧಿಕಾರಿ ಬೆಳ್ಳಿಯಪ್ಪ, ನಿಕಟಪೂರ್ವ ಕೋಶಾಧಿಕಾರಿ ರವಿಕುಮಾರ್, ಹಾಗೂ ಸಂಸ್ಥೆಯ ಪದಾಧಿಕಾರಿಗಳು , ಎಡಿಸಿ ಗಳಾದ ಲೋಕೇಶ್ವರಿ ವಿನಯ ಚಂದ್ರ, ವಾಲ್ಟರ್ ಜೆ ಪಿಂಟೋ ಹಿರಿಯ ತರಬೇತುದಾರರಾದ ರಮೇಶ್ ಆಚಾರ್ಯ, ಹಾಗೂ ಸ್ಥಳೀಯ ಸಂಸ್ಥೆಯ ದಳನಾಯಕರುಗಳು ಉಪಸ್ಥಿತರಿದ್ದರು.
ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್. ಕೆ ರವರಿಗೆ ಸ್ಥಳೀಯ ಸಂಸ್ಥೆಯಿಂದ ಅಭಿನಂದನಾ ಕಾರ್ಯಕ್ರಮವು ನಡೆಯಿತು.
ಮಹಾಸಭೆಯಲ್ಲಿ ನೂತನ ಕೋಶಾಧಿಕಾರಿ ಬೆಳ್ಳಿಯಪ್ಪ ಉಪನ್ಯಾಸಕರು ವಾಣಿ ಪದವಿ ಪೂರ್ವ ಕಾಲೇಜು ಇವರು ಆಯ್ಕೆ ಆಗಿರುತ್ತಾರೆ.
ಪ್ರಾರ್ಥನೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಗೈಡ್ ವಿದ್ಯಾರ್ಥಿಗಳು ನೆರವೇರಿಸಿ ಕೊಟ್ಟರು. ಬೆಳ್ಳಿಯಪ್ಪ ರವರು ನಿರೂಪಿಸಿ, ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಹೆಚ್ ಪದ್ಮಕುಮಾರ್ ಸ್ವಾಗತಿಸಿದರು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪ್ರಮೀಳಾ ಧನ್ಯವಾದವಿತ್ತರು.