ಅರಸಿನಮಕ್ಕಿ : ಅರಸಿನಮಕ್ಕಿ ಶಿವಾನಿ ಸಂಜೀವಿನಿ ಒಕ್ಕೂಟದಲ್ಲಿ ಮೇಣದ ಬತ್ತಿ ಹಾಗೂ ದೀಪದ ಬತ್ತಿ ಮಾಡುವ ಪ್ರಾತ್ಯಕ್ಷಿಕೆ ಯ ಮೂಲಕ ಉತ್ತಮ ಮಾಹಿತಿಯೊಂದಿಗೆ ತರಬೇತಿ ಕಾರ್ಯಕ್ರಮ ಜೂ.30 ರಂದು ನಡೆಯಿತು.
ತರಬೇತಿ ಕಾರ್ಯಕ್ರಮವನ್ನು ಅರಸಿನಮಕ್ಕಿ ಗ್ರಾ.ಪಂ.ಅಧ್ಯಕ್ಷ ನವೀನ್ ಕೆ.ಎನ್ ಉದ್ಘಾಟಿಸಿದರು
ಸ್ಥಳೀಯರಾದ ಶಿವರಾಮ ಮೇಣದ ಬತ್ತಿ ತರಬೇತಿಯನ್ನು ಉತ್ತಮ ರೀತಿಯ ವಿವರಣೆಯೊಂದಿಗೆ ಪ್ರಾತ್ಯಕ್ಷಿಕೆಯ ಮೂಲಕ ಸದಸ್ಯರಿಗೆ ಮಾಹಿತಿ ನೀಡಿದರು.
ಉದ್ಯೋಗದ ಬಗೆಗಿನ ವಸ್ತುಗಳ ಖರೀದಿ ಮಾರಾಟದ ವಿಧಾನ ಇವುಗಳ ಬಗ್ಗೆ ಉತ್ತಮ ರೀತಿಯ ಸಲಹೆ ಸೂಚನೆಗಳನ್ನು ತಾಲೂಕು ಮೇಲ್ವಿಚಾರಕಿ ಪ್ರತಿಮಾ ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ಪಡೆದ ನೀತೇಶ್ ಇವರಿಗೆ ಒಕ್ಕೂಟದ ಪರವಾಗಿ ಸನ್ಮಾನ ನಡೆದವು. ಹಾಗೂ ಗಾಯತ್ರಿ ಮೆಹಂದಲೇ ಯವರು ದೀಪದ ಬತ್ತಿ ಮಾಡುವ ತರಬೇತಿ ಯನ್ನು ಉತ್ತಮ ರೀತಿಯಲ್ಲಿ ನಡೆಸಿದರು,
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರು, ನಿತೇಶ್, ವೀಣಶ್ರೀ ಎಲ್.ಸಿ.ಆರ್.ಪಿ ಅಮಿತಾ ಎಮ್.ಬಿ.ಕೆ ರೇವತಿ, ಕೃಷಿ ಉದ್ಯೋಗ ಸಖಿ ಹಾಗೂ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಲ್.ಸಿ.ಆರ್.ಪಿ ಹೇಮಲತಾ ನಿರೂಪಿಸಿ, ಕೃಷಿ ಸಖಿ ನೀತಾ ಸ್ವಾಗತಿಸಿ, ಪಶು ಸಖಿ ವೇದಾವತಿ ಧನ್ಯವಾದವಿತ್ತರು.