22.2 C
ಪುತ್ತೂರು, ಬೆಳ್ತಂಗಡಿ
November 24, 2024
Uncategorized

ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕ್ಷೀರಸಂಗಮ ಉದ್ಘಾಟನೆ

ಗೇರುಕಟ್ಟೆ: ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘ ಇದರ ನೂತನ ಕಟ್ಟಡ ಕ್ಷೀರ ಸಂಗಮ ಇದರ ಉದ್ಘಾಟನಾ ಸಮಾರಂಭ ಜುಲೈ 2 ರಂದು ನಡೆಯಿತು.

ನೂತನ ಕಟ್ಟಡವನ್ನು ದ‌.ಕ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು.ದ.ಕ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ ಜಯರಾಮ ರೈ ಬಳಜ್ಜ ಕಚೇರಿ ಉದ್ಘಾಟನೆ, ದ‌ಕ. ಹಾಲು ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ ಸಭಾಭವನ ಉದ್ಘಾಟಿಸಿ ಶುಭಕೋರಿದರು.

ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಸನ್ಮಾನಿತರನ್ನು ಸನ್ಮಾನಿಸಿ ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ಧನ ಗೌಡ ವಹಿಸಿದ್ದರು.ವೇದಿಕೆಯಲ್ಲಿ ದ‌ಕ.ಹಾ‌ಲು ಒಕ್ಕೂಟದ ನಿರ್ದೇಶಕರಾದ ಸವಿತಾ ಎನ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾದ ಡಿ.ಅಶೋಕ,ಕಳಿಯ ಗ್ರಾ.ಪಂ ಅಧ್ಯಕ್ಷೆ ಸುಭಾಷಿಣಿ ಜನಾರ್ಧನ ಗೌಡ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಸುರೇಂದ್ರ ಕುಮಾರ್,ಕಳಿಯ ಸಿಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು,ದ.ಕ ಜಿಲ್ಲಾ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಡಾ. ನಿತ್ಯಾನಂದ ಭಕ್ತ,ವ್ಯವಸ್ಥಾಪಕರಾದ ಡಾ. ರಾಮಕೃಷ್ಣ ಭಟ್ ಎಂ,ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್,ದ.ಕ ಹಾ.ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ. ಸತೀಶ್ ರಾವ್,ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಭುವನೇಶ್ ಜಿ ಗೇರುಕಟ್ಟೆ, ಸುರೇಂದ್ರ ಕುಮಾರ್ ಜೈನ್ ಕಳಿಯಬೀಡು ಕಳಿಯ,ಕಳಿಯ ಗ್ರಾ.ಪಂ ಪಿಡಿಓ ಸಂತೋಷ್ ಪಾಟೀಲ್,ಬೆಳ್ತಂಗಡಿ ಪಶು ವೈದ್ಯಾಧಿಕಾರಿಗಳು ಡಾ.ಗಣಪತಿ,ವಿಸ್ತರಣಾಧಿಕಾರಿಗಳಾದ ರಾಜೇಶ್ ಪಿ ಕಾಮತ್,ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ವಿ ಪ್ರತಿಮಾ ಉಪಸ್ಥಿತರಿದ್ದರು.ಸಂಘದ ಉಪಾಧ್ಯಕ್ಷೆ ಕುಶಲಾವತಿ,ಮುಖ್ಯಕಾರ್ಯನಿರ್ವಹಣಾಧಿಕಾರಿ ಗುಲಾಬಿ ಪಿ,ಆಡಳಿತ ಮಂಡಳಿಯ ಸದಸ್ಯರಾದ ಜಯನಾರಾಯಣ ಉಪಾಧ್ಯಾಯ ಕೆಮ್ಮರ್ಜೆ,ಪ್ರವೀಣ್ ಪೂಜಾರಿ ಬಳ್ಳಿದಡ್ಡ,ಗಿರಿಯಪ್ಪ ಗೌಡ,ಕೇಶವ ಪೂಜಾರಿ ಕಜೆ,ಸಿರಿಲ್ ಪಿಂಟೋ,ರಂಜನ್ ಹೆಚ್,ನೆವಿಲ್ ಸ್ಟೀವನ್ ಮೋರಾಸ್,ವಸಂತ ನಾಯ್ಕ್,ಕೇಶವತಿ,ಯೋಗೀನಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ದಿವಾಕರ ಶಾಸ್ತ್ರಿ,ಎಮ್ ಹರಿದಾಸ ಪಡಂತಾಯ ಹಾಗೂ ಡಾಕ್ಟರೇಟ್ ಪದವಿ ಪಡೆದ ಅನುದೀಪ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ‌ ನಿರೂಪಿಸಿದರು, ಉಮೇಶ್ ಕಲ್ಲಡ್ಕ ಸ್ವಾಗತಿಸಿದರು.ಜಗನ್ನಾಥ ಪ್ರಾರ್ಥಿಸಿದರು

Related posts

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಭೇಟಿ

Suddi Udaya

ಸೋಣಂದೂರು: ಕೊಲ್ಪದಬೈಲು ಬಳಿ ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ: ಸ್ಥಳೀಯರಿಂದ ತೆರವು ಕಾರ್ಯ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಹಿಂದಿ ದಿನಾಚರಣೆ

Suddi Udaya

ಜೆಸಿಐ ಮಡಂತ್ಯಾರು ಇದರ 2025ನೆ ಸಾಲಿನ ಅಧ್ಯಕ್ಷರಾಗಿ ಅಮಿತಾ ಅಶೋಕ್

Suddi Udaya

ಮಡಂತ್ಯಾರು ವಲಯದ ಮಚ್ಚಿನ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಪ್ರಕಾಶ್ ರವರಿಗೆ ಕೃತಕ ಕಾಲಿನ ವ್ಯವಸ್ಥೆ

Suddi Udaya
error: Content is protected !!