September 6, 2026
Uncategorized

ಕಂಡವರ ಮನದಲ್ಲಿ ಶ್ರೀ ವಿಶ್ವೇಶತೀರ್ಥರು.ಟಿ ನಾರಾಯಣ ಭಟ್ ರಾಮ ಕುಂಜ ಇವರ ಕೃತಿ ಬಿಡುಗಡೆ.

ಟಿ ನಾರಾಯಣ ಭಟ್ ರಾಮ ಕುಂಜ ಇವರು ಬರೆದಿರುವ ಕಂಡವರ ಮನದಲ್ಲಿ ಶ್ರೀ ವಿಶ್ವೇಶತೀರ್ಥರು, ಭಾವಾಂತರಂಗದ ನುಡಿಬಿಂದುಗಳು ಎಂಬ ಕೃತಿ ಇತ್ತೀಚೆಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆದ ಪೂಜ್ಯರ ಪಂಚಮ ಆರಾಧನಾ ಮಹೋತ್ಸವದಲ್ಲಿ, ಉಡುಪಿ ಪೇಜಾವರ ಮಠಾಧೀಶ ಡಾ. ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರ ದಿವ್ಯ ಹಸ್ತದಿಂದ ಬಿಡುಗಡೆಗೊಂಡಿತು. ಇದು ಪೂಜ್ಯರ ಬಗೆಗೆ ನಾರಾಯಣ ಭಟ್ ಬರೆದ 7ನೆಯ ಕೃತಿ ಆಗಿದೆ.

ಪೂಜ್ಯ ವಿಶ್ವೇಶ ತೀರ್ಥರ ಗರಡಿಯಲ್ಲಿ ಪಳಗಿದ, ಅವರದೇ ಹುಟ್ಟೂರ ಹಾಗೂ ಕಲಿತ ಸಂಸ್ಥೆಯಲ್ಲಿ ಮುಖ್ಯ ಶಿಕ್ಷಕರಾಗಿ ದುಡಿದ ನಾರಾಯಣ ಭಟ್ ಅವರಿಗೆ ತನ್ನ ಗುರುಗಳ ಬಗ್ಗೆ ಎಷ್ಟು ಬರೆದರು ಸಾಲದೆಂಬಂತೆ ಮತ್ತೆ ಮತ್ತೆ ಕೃತಿಗಳನ್ನು ರಚಿಸುತ್ತಿರುವುದು ಇವರ ಗುರು ಭಕ್ತಿಯ ದ್ಯೋತಕವೆನಿಸಿದೆ. ಮಕ್ಕಳಿಗಾಗಿ ಹಾಗೂ ಸಮಾಜಕ್ಕಾಗಿ ಸಲ್ಲಿಸುತ್ತಿರುವ ಸಾಹಿತ್ಯ, ಶೈಕ್ಷಣಿಕ, ಸಮಾಜ ಸೇವೆ ಆದರ್ಶ ಪ್ರಾಯವಾಗಿದೆ. ಸುಮಾರು ಅರ್ಧ ಶತಕದಷ್ಟು ಮಕ್ಕಳ ಕೃತಿಗಳನ್ನು ರಚಿಸುತ್ತಾ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿರುತ್ತಾರೆ ಹಾಗೂ ಗುರುಗಳ ಆರಾಧನಾ ಮಹೋತ್ಸವದಲ್ಲಿ ಪೂಜ್ಯರ ಶೈಕ್ಷಣಿಕ ಕಾಳಜಿಯ ಬಗೆಗೆ ವಿಶಿಷ್ಟ ಉಪನ್ಯಾಸವಿತ್ತು ಮನಮುಟ್ಟುವಂತೆ ತಿಳಿಸಿರುತ್ತಾರೆ ಎಂದು ತನ್ನ ಅನುಗ್ರಹ ಭಾಷಣದಲ್ಲಿ ನುಡಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಕೃತಿಯು ಪೂಜ್ಯರ ಸಮಗ್ರ ವ್ಯಕ್ತಿತ್ವ ಚಿತ್ರಣವನ್ನು ಈ ಕಿರು ಪ್ರತಿಯಲ್ಲಿ ಹಿಡಿದಿಟ್ಟಿರುವುದು ದೊಡ್ಡ ಸಾಹಸವೆಂದು ಮೆಚ್ಚುಗೆಯ ನುಡಿಗಳನ್ನಾಡಿ ಶುಭ ಹರಸಿದರು .

ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ ಶ್ರೀನಿವಾಸ ವರಖೇಡಿ ಆಚಾರ್ಯರು ಪೂಜ್ಯ ವಿಶ್ವೇಶತೀರ್ಥ ಗುರುಗಳನ್ನು ಹತ್ತಿರದಿಂದ ಕಂಡ ನಾರಾಯಣ ಭಟ್ ಪೂಜ್ಯರ ವ್ಯಕ್ತಿತ್ವವನ್ನು ಹಲವು ಕೋನಗಳಲ್ಲಿ ಕಂಡು ಚಿತ್ರಿಸುವ ಮೂಲಕ ಮುಂದಿನ ತಲೆಮಾರಿಗೆ ಅಧ್ಯಯನ ಯೋಗ್ಯ ಕಾರ್ಯವನ್ನು ಮಾಡಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.

ನಾರಾಯಣ ಭಟ್ ಅವರನ್ನು ಪೂಜ್ಯ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಶಾಲು ಹೊದಿಸಿ ಫಲಮಂತ್ರಾಕ್ಷತೆ ಸ್ಮರಣಕೆಯನ್ನು ನೀಡಿ ಆಶೀರ್ವದಿಸಿದರು.

Related posts

ಕನ್ಯಾಡಿ ಗುತ್ತು ಮನೆಯ ಅಚ್ಚುತರಾವ್ ಮತ್ತಿಲ ನಿಧನ

Suddi Udaya

ಇಳಂತಿಲ ಗ್ರಾ.ಪಂ. ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಮೀನಾಕ್ಷಿ ಯವರ ಪರವಾಗಿ ಮನೆ ಮನೆ ಭೇಟಿ ಅಭಿಯಾನ

Suddi Udaya

ಯಕ್ಷಭಾರತಿ ದಶಮಾನೋತ್ಸವದ ಅಂಗವಾಗಿ ನಡೆಯುವ ಸನ್ಮಾನ ಕಾರ್ಯಕ್ರಮ ಮತ್ತು ದೇವಿ ಮಹಾತ್ಮೆ ಯಕ್ಷಗಾನದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕೊಯ್ಯೂರು : ಕಾಂತಪ್ಪ ಗೌಡರವರಿಂದ ಭಜಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಭಜನಾ ಮಂಡಳಿಗೆ ಮೇಜು ಕೊಡುಗೆ

Suddi Udaya

ಕೊಯ್ಯೂರು ಬಿಜೆಪಿ ಶಕ್ತಿ ಕೇಂದ್ರದ 157ನೇ ಬೂತು ವತಿಯಿಂದ ಗುರು ಪೂರ್ಣಿಮೆ ಆಚರಣೆ

Suddi Udaya

ಗುರುವಾಯನಕೆರೆಯಲ್ಲಿ ಶಾಸಕ ಹರೀಶ್ ಪೂಂಜಾ ರವರ ಬ್ರಹತ್ ಬ್ಯಾನರ್

Suddi Udaya
error: Content is protected !!