September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಾರ್ಮಾಡಿ ಘಾಟ್ ನಲ್ಲಿ ಒಂದೇ ದಿನ ಮೂರು ವಾಹನಗಳು ಪಲ್ಟಿ

ಚಾರ್ಮಾಡಿ ಫಾಟ್‌ನಲ್ಲಿ ಒಂದೇ ದಿನ ಮೂರು ವಾಹನಗಳು ಪಲ್ಟಿಯಾದ ಘಟನೆ ಜು.2 ರಂದು ನಡೆದಿದೆ.

ನಿನ್ನೆ ಸಂಜೆಯೂ ಉತ್ತಮ ಮಳೆ ಸುರಿದಿದ್ದು ರಸ್ತೆ ಜಾರುತ್ತಿದ್ದ ಕಾರಣ ಚಾಲಕರ ನಿಯಂತ್ರಣಕ್ಕೆ ಸಿಗದೆ ವಾಹನಗಳು ಉರುಳಿ ಬಿದ್ದಿವೆ ಎನ್ನಲಾಗಿದೆ.

ಉಜಿರೆಯಿಂದ ಮೂಡಿಗೆರೆ ಕಡೆಗೆ ಪ್ರಯಾಣಿಸುತ್ತಿದ್ದ ಟಿಟಿ ವಾಹನ ಹಾಗೂ ಮೂಡಿಗೆರೆಯಿಂದ ಉಜಿರೆ ಕಡೆ ಹೋಗುತ್ತಿದ್ದ ಕಾರು ಚಾರ್ಮಾಡಿ ಪೇಟೆಯಲ್ಲಿ 100 ಮೀ. ಅಂತರದಲ್ಲಿ ಉರುಳಿ ಬಿದ್ದಿವೆ. ಇಲ್ಲಿನ ಸುಮಾರು 3 ಕಿ. ಮೀ. ವ್ಯಾಪ್ತಿಯ ರಸ್ತೆ ಮಳೆಗಾಲದಲ್ಲಿ ವಿಪರೀತ ಜಾರುವುದರಿಂದ ಹಲವಾರು ಅಪಘಾತಗಳು ಸಂಭವಿಸುತ್ತವೆ. ಚಾರ್ಮಾಡಿ ಘಾಟಿಯ ಒಂಬತ್ತನೇ ತಿರುವಿನ ಸಮೀಪ ಬೆಂಗಳೂರು ಮೂಲದ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಾಗಳಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.

Related posts

ಬಿಪಿಎಲ್ ಕಾರ್ಡ್ ಪಡೆಯಲು ಆದಾಯ ಮಿತಿ ಏರಿಸಿ: ಎಂಎಲ್‌ಸಿ ಪ್ರತಾಪಸಿಂಹ ನಾಯಕ್

Suddi Udaya

ಶಿಬರಾಜೆ ಪರಪ್ಪು ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿಯ ಮಕ್ಕಳಿಗೆ ದಾನಿಗಳಿಂದ ಶಾಲು ಮತ್ತು ತಾಳ ವಿತರಣೆ

Suddi Udaya

ಕ್ಯಾನ್ಸರ್ ಪೀಡಿತರಿಗೆ ಕೇಶ ದಾನ ಮಾಡಿ ಮಾನವೀಯತೆ ಮೆರೆದ ಖುಷಿ ಅಂಬ್ಯುಲೆನ್ಸ್ ಡ್ರೈವರ್ ಭುವನೇಶ್ ಹೆಗ್ಡೆ

Suddi Udaya

ಉಜಿರೆ ಗ್ರಾ.ಪ. ವತಿಯಿಂದ ಸರಕಾರದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

Suddi Udaya

ಮೈಸೂರು ದಸರಾ ಸಿ.ಎಂ ಕಪ್ ನ ಸ್ನಾಚ್, ಕ್ಲೀನ್ ಮತ್ತು ಜೆರ್ಕ್ ನಲ್ಲಿ ನಿಡ್ಲೆಯ ಪ್ರತ್ಯುಷ್‌ ರವರಿಗೆ ಗೋಲ್ಡ್ ಮೆಡಲ್

Suddi Udaya

ಶ್ರೀ ಮಂ.ಸ್ವಾ. ಅ. ಹಿ. ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

Suddi Udaya
error: Content is protected !!