ಧಮ೯ಸ್ಥಳ : ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 4ನೇ ಚಾತುರ್ಮಾಸ್ಯ ವ್ರತಾರಂಭ ಕಾರ್ಯಕ್ರಮ ಜು.3ರಂದು ಕಲ್ಮಂಜದ ಶ್ರೀ ಗುರುದೇವ ಮಠದಲ್ಲಿ ವಿಜೃಂಭಣೆಯಿಂದ ಆರಂಭಗೊಂಡಿತು.
ಬೆಳಿಗ್ಗೆ ವ್ರತಸಂಕಲ್ಪ ಪ್ರಯುಕ್ತ ರಾಮ ತಾರಕ ಯಜ್ಞ ಹಾಗೂ ವೈದಿಕ ವಿಧಿ ವಿಧಾನಗಳು, ಶ್ರೀರಾಮ ದೇವರಿಗೆ ವಿಶೇಷ ಪೂಜೆ, ಪಜಿರಡ್ಕ ಶ್ರೀ ದೇವಲಿಂಗೇಶ್ವರ ದೇವಾಲಯದಿಂದ ಶ್ರೀಗಳ ಪುರಪ್ರವೇಶ ನಡೆಯಿತು.
ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಮೀನುಗಾರಿಕೆ ಸಚಿವ ಮಂಕಾಳ್ ಎಸ್. ವೈದ್ಯ ನೆರವೇರಿಸಿದರು.
ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸೇವಾ ಸಮಿತಿ ಅಧ್ಯಕ್ಷ ಜಯಂತ ಕೋಟ್ಯಾನ್, ಟ್ರಸ್ಟಿ. ಚಿತ್ತರಂಜನ್ , ಶ್ರೀ ಧರ ನಾಯಕ್, ವಾಮನ ನಾಯಕ್, ಹೆಚ್.ಆರ್ ನಾಯಕ್, ಗೋವಿಂದ ನಾಯಕ್, ಗೋವಿಂದ ನಾಯಕ್, ಆರ್. ಜೆ ನಾಯಕ್, ಕೃಷ್ಣ ನಾಯಕ್, ಸಚಿವರ ಪತ್ನಿ ಶ್ರೀಮತಿ ಪುಷ್ಪಲತಾ, ಸುಬ್ರಾಯ ಜೆ.ನಾಯಕ್, ರಾಜು ಪೂಜಾರಿ, ಸಂಜೀವ ಪೂಜಾರಿ ಬಂಟ್ವಾಳ, ಬೇಬಿ ಕುಂದರ್, ಚಂದ್ರಶೇಖರ ಗೌಡ, ಟ್ರಸ್ಟಿ ತುಕಾರಾಂ ಸಾಲಿಯಾನ್, ಪ್ರಶಾಂತ್ ಪಾರೆಂಕಿ, ಕೃಷ್ಣಪ್ಪ ಗುಡಿಗಾರ್ ಮೊದಲಾದವರು ಭಾಗವಹಿಸಿದ್ದರು. ಉಪನ್ಯಾಸ ಕೇಶವ ಬಂಗೇರ ಕಾಯ೯ಕ್ರಮ ನಿರೂಪಿಸಿ, ಸ್ವಾಗತಿಸಿದರು.
ಮೌನ ಚಾತುರ್ಮಾಸ್ಯ:
ಈ ಬಾರಿ ಚಾತುರ್ಮಾಸ್ಯದ 8 ಭಾನುವಾರಗಳನ್ನು ಹೊರತುಪಡಿಸಿ ಉಳಿದ ದಿನಗಳಂದು ಮೌನ ಚಾತುರ್ಮಾಸ್ಯ ನಡೆಯುವ ಕಾರಣ ಸ್ವಾಮೀಜಿಗಳ ದರ್ಶನ ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ಇರುವುದಿಲ್ಲ.