September 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಶಿಶಿಲ ದೇವಾಲಯ ವ್ಯವಸ್ಥಾಪನಾ ಸಮಿತಿ ರಚನೆಗೆ ಮೀನ ಮೇಷ..ಭಕ್ತರ ಆಕ್ರೋಶ

ಶಿಶಿಲ: ಇತಿಹಾಸ ಪ್ರಸಿದ್ಧ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚನೆಗೆ ಎರಡು ವರ್ಷಗಳಿಂದ ಮೀನ ಮೇಷ ನಡೆಯುತ್ತಿದೆ.

ಜೀರ್ಣೋದ್ಧಾರ ಮತ್ತು ಎರಡು ಬ್ರಹ್ಮಕಲಶವನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಕೀರ್ತಿ ಗ್ರಾಮಸ್ಥರಿದ್ದು. ಇದೀಗಿನ ರಾಜಕೀಯ ವ್ಯವಸ್ಥೆಯಿಂದ ಇನ್ನೂ ವ್ಯವಸ್ಥಾಪನಾ ಸಮಿತಿಯು ರಚನೆಯಾಗದೆ ಬಾಕಿಯಿರುವುದಾಗಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಿತಿ ಇಲ್ಲದೆ ದೇವಾಲಯದ ಎಲ್ಲಾ ಅಭಿವೃದ್ಧಿ ಕಾರ್ಯ ನಿಂತಿದೆ. ಸಾವಿರಾರು ಊರ‌ ಪರವೂರಿಂದ ಭಕ್ತಾದಿಗಳು ಬರುತ್ತಿದ್ದಾರೆ.ಅನ್ನ ದಾಸೊಹ ನಡೆಯುತ್ತಿದೆ. ಮತ್ಸ್ಯ ಸಂಕುಲಗಳಿದ್ದಾವೆ. ಕೃಷಿ ನಿರ್ವಹಣೆ ಆಗಬೇಕಾಗಿದೆ. ಹೀಗಿದ್ದರೂ ವ್ಯವಸ್ಥಾಪನಾ ಸಮಿತಿ ಸದಸ್ಯರು ಆಯ್ಕೆ ಆಗಿದ್ದಾರೊ ಇಲ್ಲವೊ ಇನ್ನೂ ಮಾಹಿತಿ ಇಲ್ಲ. ಮುಜರಾಯಿ ಇಲಾಖೆಯನ್ನು ಸಂಪರ್ಕಿಸಿದರೆ ಜವಾಬ್ದಾರಿ ಉತ್ತರವಿಲ್ಲ. ಗ್ರಾಮದ ಊರ ಪರವೂರ ದಾನಿಗಳಿಂದಲೆ ಅಭಿವೃದ್ಧಿ ಆಗಿರುವ ಈ ಪುಣ್ಯಕ್ಷೇತ್ರಕ್ಕೆ ಈ ರೀತಿಯ ಸಮಿತಿ ರಚನೆಗೆ ಯಾಕೆ ತಡವಾಗುತ್ತಿದೆ ಎಂಬ ಮಾಹಿತಿ ಇಲ್ಲ.


ಆದುದರಿಂದ ಕೂಡಲೆ ವ್ಯವಸ್ಥಾಪನಾ ಸಮಿತಿ ರಚಿಸುವಂತೆ ಭಕ್ತರು ಆಗ್ರಹಿಸಿದ್ದಾರೆ ಹಾಗೂ ಮುಜರಾಯಿ ಇಲಾಖೆಗೂ ಮಾಹಿತಿ ನೀಡಿರುತ್ತಾರೆ.

ತಪ್ಪಿದ್ದಲ್ಲಿ ಗ್ರಾಮದ ಭಕ್ತಾಧಿಗಳೆ ಊರ ಭಕ್ತರ ಸಭೆ ಕರೆದು ಪ್ರತಿಭಟನೆಗೆ ಮುಂದಾಗುವುದಾಗಿ ಮಾಜಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿಶಿಲ ಬಿ.ಜಯರಾಮ ನೆಲ್ಲಿತ್ತಾಯ ಮತ್ತು ಕರುಣಾಕರ ಶಿಶಿಲ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿಯ ಪ್ರಯುಕ್ತ ವಿಶೇಷ ಭಜನಾ ಕಾರ್ಯಕ್ರಮ

Suddi Udaya

ಉಜಿರೆ ಎಸ್ ಡಿ ಎಂ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಪ್ರಶಸ್ತಿಗಳ ಸರಮಾಲೆ

Suddi Udaya

ವೇಣೂರು ಎಸ್.ಡಿ.ಎಂ. ಐಟಿಐ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ

Suddi Udaya

ಬೆಳ್ತಂಗಡಿ ಸರಕಾರಿ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ

Suddi Udaya

ಬೆಳ್ತಂಗಡಿ : ಕುಣಿತ ಭಜನಾ ತರಬೇತಿ ನೀಡುತ್ತಿರುವ ತರಬೇತಿದಾರರುಗಳ ಸಭೆ: ಪ್ರಥಮ ಬಾರಿಗೆ ಭಜನೆಯಲ್ಲಿ ನಿನ್ನೆ ಇಂದು ನಾಳೆಯ ಬಗ್ಗೆ ಗಂಭೀರ ಚರ್ಚೆ

Suddi Udaya

ಅಭಿವೃದ್ಧಿ ಕಾಮಗಾರಿಗಳಿಗೆ ದ.ಕ. ಜಿಲ್ಲೆಯ 15 ಬ್ಲಾಕ್‌ಗಳ ಮರಳು ದಾಸ್ತಾನನ್ನು ಆ್ಯಪ್ ಮೂಲಕ ಪೂರೈಸಲು ಅವಕಾಶ: ಜಿಲ್ಲಾ ಮರಳು ಉಸ್ತುವಾರಿ ಸಮಿತಿ

Suddi Udaya
error: Content is protected !!