ಉಜಿರೆ: ಕಲಿಕೆ ಎಂಬುದು ವಿದ್ಯಾರ್ಥಿ ಆದಾಗ ಮಾತ್ರ ಆರಂಭವಾಗುವುದಲ್ಲ ಹುಟ್ಟಿನಿಂದಲೇ ಆರಂಭವಾಗುತ್ತದೆ ಮನುಷ್ಯನಿಗೆ ಜೀವನ ಶಿಕ್ಷಣ ಅತಿ ಅಗತ್ಯ ಜೀವನವನ್ನು ಬಂದಂತೆ ಸ್ವೀಕರಿಸಿ ಜೀವನದ ಪಾಠ ಕಲಿಬೇಕು ಎಂದಾದರೆ ನಾಲ್ಕು ಊರು ಸುತ್ತಬೇಕು. ನಿಂತ ನೀರು ಕೊಳಚೆಯಾಗಿರುತ್ತೆ ಆದ್ರೆ ಹರಿಯುವ ನೀರು ಶುಭ್ರವಾಗಿರುತ್ತದೆ. ಕನಸನ್ನು ಕಾಣುವುದು ಮುಖ್ಯವಲ್ಲ ಅದನ್ನು ನನಸಾಗಿಸುವುದು ಮುಖ್ಯ ಅದಕ್ಕಾಗಿ ಛಲ ಮುಖ್ಯ. ಗೆದ್ದವ ಸಾಧಕನಾಗುತ್ತಾನೆ. ಸೋತವ ಮಾರ್ಗದರ್ಶನಾಗುತ್ತಾನೆ ಅದಕ್ಕಾಗಿ ಸಾಧ್ಯವಾದಷ್ಟು ಕಲಿಯಿರಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳದ ಶ್ರೀನಿವಾಸ್ ಪೂಜಾರಿಯವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಉಜಿರೆಯ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು ತಮ್ಮ ಅತಿಥಿ ಭಾಷಣದ ಮೂಲಕ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಉಜಿರೆಯ ಸಂಧ್ಯಾ ಫ್ರೆಶ್ ನ ಮಾಲೀಕರಾದ ಶ್ರೀಮತಿ ಅರ್ಚನಾ ರಾಜೇಶ್ ಪೈ ಇವರು ಜೀವನ ಕೌಶಲ್ಯವಿದ್ದರೆ ಜೀವನದಲ್ಲಿ ಯಶಸ್ಸು ಗ್ಯಾರಂಟಿ ಅದಕ್ಕಾಗಿ ಆತ್ಮವಿಶ್ವಾಸ ಮತ್ತು ಮನೆಯವರ ಸಹಕಾರ ಅಗತ್ಯ ಸ್ವ ಉದ್ಯೋಗ ಅತಿ ಉತ್ತಮ ಹುಟ್ಟು/ಸಾವು ಯಾರು ಕೈಯಲ್ಲಿ ಇಲ್ಲ ಆದರೆ ಹುಟ್ಟುವಾಗ ಬಡವನಾದರು ಸಾಯುವಾಗ ಶ್ರೀಮಂತರಾಗಿ ಸಾಯಬೇಕು. ಅದಕ್ಕಾಗಿ ಪರಿಶ್ರಮ ಅಗತ್ಯ ಸಾಧ್ಯವಾದಷ್ಟು ಹೊಂದಾಣಿಕೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಾಂಶುಪಾಲರಾದ ವಿ ಪ್ರಕಾಶ್ ಕಾಮತ್ ವಿದ್ಯಾರ್ಥಿನಿಯರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಕೋರ್ಸ್ ಕಂಪ್ಲೀಟ್ ಸರ್ಟಿಫಿಕೇಟ್ ನೀಡಲಾಯಿತು ಮತ್ತು ಕೆಲವು ವಿದ್ಯಾರ್ಥಿನಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕು. ಮೇಘನಾ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಕು ಸಮೀಕ್ಷಾ ವಂದಿಸಿದರು.