September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಧರ್ಮಾಧ್ಯಕ್ಷರ ರಜತ ಸಂಭ್ರಮದ ಭವ್ಯಾಚರಣೆ

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಅವರ ಇಪ್ಪತ್ತೈದನೇ ಧರ್ಮಾಧ್ಯಕ್ಷ ವರ್ತಂತಿಯ ಬೆಳ್ಳಿ ಸಂಭ್ರಮವನ್ನು ಅದ್ದೂರಿಯಾಗಿ ನೆಲ್ಯಾಡಿ ಸಂತ ಅಲ್ಫೋನ್ಸ ದೇವಾಲಯದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಆರಳ ಸೆಂಟ್ ಮೇರಿಸ್ ಮತ್ತು ಇಚಿಲಂಪಾಡಿ ಲಿಟಲ್ ಫ್ಲವರ್ ಚರ್ಚ್‌ನ ಎಲ್ಲಾ ಸದಸ್ಯರು ಭಾಗವಹಿಸಿ ಧರ್ಮಾಧ್ಯಕ್ಷರಿಗೆ ಶುಭಕೋರಿದರು.

ಟೊಮಿ ಮಟ್ಟಮ್, ಜೋಶಿ ಪುಳಿಯಮಾಕ್ಕಲ್, ಶ್ರೀಮತಿ ಜೋಯಿಸಿ ಕವಳಕ್ಕಾಟ್ ಮತ್ತು ಮಾಸ್ಟರ್ ಡೆಲ್ವಿನ್ ಶುಭ ನುಡಿಗಳನ್ನು ಆಡಿದರು. ತ್ರಿವಳಿ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾ. ಷಾಜಿ ಮಾತ್ಯು ಸ್ವಾಗತಿಸಿ, ಫಾ ಎಬಿನ್ ವಂದಿಸಿದರು. ಕಾರ್ಯದರ್ಶಿ ಶ್ರೀಮತಿ ಜೆಸ್ಸಿ ಕೆ.ಜೆ. ಕಾರ್ಯಕ್ರಮ ನಿರೂಪಿಸಿದರು.

Related posts

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ದಾವಣಗೆರೆಯಲ್ಲಿ ನಡೆದ ರಾಜ್ಯ ಸಹಕಾರಿ ಸಮಾವೇಶದಲ್ಲಿ ಬೆಳ್ತಂಗಡಿ ಮಂಡಲ ಸಹಕಾರ ಭಾರತಿ ಪದಾಧಿಕಾರಿಗಳು ಭಾಗಿ

Suddi Udaya

ಅಕ್ರಮ ಮರಳು ಸಾಗಿಸುತ್ತಿದ್ದ ಎರಡು ಲಾರಿ ಪೊಲೀಸರ ವಶ: ತಹಶೀಲ್ದಾರ್ ತಂಡ ಕಾರ್ಯಾಚರಣೆ

Suddi Udaya

ನಾವೂರು ಸರಕಾರಿ ಪ್ರೌಢ ಶಾಲಾ ಮಂತ್ರಿ ಮಂಡಲ ರಚನೆ

Suddi Udaya

ಕಳೆಂಜ: ಶಿಬರಾಜೆಯ ಬ್ರಹ್ಮಲಿಂಗ ದೇವರಿಗೆ ವೃಶ್ಚಿಕ ಸಂಕ್ರಮಣದ ಪ್ರಯುಕ್ತ ವಿಶೇಷ ಅಭಿಷೇಕ ಪೂಜೆ

Suddi Udaya

ನಾವರ: ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ: ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾ‌ರ್ ಭೇಟಿ

Suddi Udaya
error: Content is protected !!