ಚಾರ್ಮಾಡಿ ಫಾಟ್‌ನಲ್ಲಿ ಒಂದೇ ದಿನ ಮೂರು ವಾಹನಗಳು ಪಲ್ಟಿಯಾದ ಘಟನೆ ಜು.2 ರಂದು ನಡೆದಿದೆ.
ನಿನ್ನೆ ಸಂಜೆಯೂ ಉತ್ತಮ ಮಳೆ ಸುರಿದಿದ್ದು ರಸ್ತೆ ಜಾರುತ್ತಿದ್ದ ಕಾರಣ ಚಾಲಕರ ನಿಯಂತ್ರಣಕ್ಕೆ ಸಿಗದೆ ವಾಹನಗಳು ಉರುಳಿ ಬಿದ್ದಿವೆ ಎನ್ನಲಾಗಿದೆ.
ಉಜಿರೆಯಿಂದ ಮೂಡಿಗೆರೆ ಕಡೆಗೆ ಪ್ರಯಾಣಿಸುತ್ತಿದ್ದ ಟಿಟಿ ವಾಹನ ಹಾಗೂ ಮೂಡಿಗೆರೆಯಿಂದ ಉಜಿರೆ ಕಡೆ ಹೋಗುತ್ತಿದ್ದ ಕಾರು ಚಾರ್ಮಾಡಿ ಪೇಟೆಯಲ್ಲಿ 100 ಮೀ. ಅಂತರದಲ್ಲಿ ಉರುಳಿ ಬಿದ್ದಿವೆ. ಇಲ್ಲಿನ ಸುಮಾರು 3 ಕಿ. ಮೀ. ವ್ಯಾಪ್ತಿಯ ರಸ್ತೆ ಮಳೆಗಾಲದಲ್ಲಿ ವಿಪರೀತ ಜಾರುವುದರಿಂದ ಹಲವಾರು ಅಪಘಾತಗಳು ಸಂಭವಿಸುತ್ತವೆ. ಚಾರ್ಮಾಡಿ ಘಾಟಿಯ ಒಂಬತ್ತನೇ ತಿರುವಿನ ಸಮೀಪ ಬೆಂಗಳೂರು ಮೂಲದ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಾಗಳಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.