ಮಡಂತ್ಯಾರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ)ಮಡಂತ್ಯಾರು ವಲಯ ಮತ್ತು ರೋಟರಿ ಕ್ಲಬ್ ಮಡಂತ್ಯಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಪಾರೆಂಕಿ ದೇವಸ್ಥಾನದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಸಲಾಯಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಪ್ರಭಾ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವರ್ತಕರ ಸಂಘದ ಅಧ್ಯಕ್ಷರಾದ ಜಯಂತ ಶೆಟ್ಟಿ, ರೋಟರಿ ಕ್ಲಬ್ ಸಂಸ್ಥೆ ಯ ಅಧ್ಯಕ್ಷರು ಹಾಗೂ ಪಾರೆಂಕಿ ದೇವಸ್ಥಾನದ ಪ್ರಧಾನ ಅರ್ಚಕರಾಗಿರುವ ಶ್ರೀಧರ್ ಭಟ್, ಮಡಂತ್ಯಾರು ಗ್ರಾಮ ಪಂಚಾಯತ್ ಉಪಧ್ಯಾಕ್ಷರು ಶ್ರೀಮತಿ ಸಂಗೀತ ಶೆಟ್ಟಿ, ತಾಲ್ಲೂಕಿನ ಜನಜಾಗೃತಿ ಸಮಿತಿ ಸದಸ್ಯರು ಪ್ರವೀಣ್ ಶೆಟ್ಟಿ, ಒಕ್ಕೂಟದ ವಲಯ ಅಧ್ಯಕ್ಷರು ಹಾಗೂ ವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್ ಸತೀಶ್ ಆಚಾರ್ಯ, ಮಡಂತ್ಯಾರು ವಲಯದ ಮೇಲ್ವಿಚಾರಕರು ವಸಂತಕುಮಾರ್ , ದೇವಾಸ್ಥನದ ಆಡಳಿತ ಸಮಿತಿ ಸದಸ್ಯರು, ಒಕ್ಕೂಟದ ಅಧ್ಯಕ್ಷರು, ದಯಾನಂದ, ಶಂಕರಶರ್ಮ, ಬಾಲಚಂದ್ರ ಹೆಗ್ಡೆ ಮತ್ತು ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿ ಪರಮೇಶ್ವರ್, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಲೀಲಾವತಿ, ಶ್ರೀಮತಿ ಶೋಭಾ ಮತ್ತು ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ಗಿಡ ನಾಟಿ ಮಾಡಲಾಯಿತ್ತು ಮತ್ತು ವಿತರಣೆ ಮಾಡಲಾಯಿತ್ತು