April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಅರಸಿನಮಕ್ಕಿ : ಸೈನಿಕ ಕೆ. ಮಹಾಬಲ ಮುದ್ದಿಗೆಯವರಿಗೆ ನಾಗರಿಕರಿಂದ ಅಭಿನಂದನೆ

ಅರಸಿನಮಕ್ಕಿ : ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡು ಭಾರತೀಯ ಸೈನ್ಯದಲ್ಲಿ 40 ವರ್ಷಗಳ ಸೇವೆ ಸಲ್ಲಿಸಿ ಸುಬೇದಾರ್ ಹುದ್ದೆಯವರೆಗೆ ಭಡ್ತಿಗೊಂಡು ಜೂ.30ರಂದು ಸೇವಾ ನಿವೃತ್ತಿ ಹೊಂದಿ ಜು.5ರಂದು ಹುಟ್ಟೂರಿಗೆ ಆಗಮಿಸಿದ ಹತ್ಯಡ್ಕ ಗ್ರಾಮದ ಸೈನಿಕ ಕೆ. ಮಹಾಬಲ ಮುದ್ದಿಗೆಯವರಿಗೆ ನಾಗರಿಕರಿಂದ ಕೊಕ್ಕಡ ಜಂಕ್ಷನ್ ನಿಂದ ಮುದ್ದಿಗೆ ಪೇಟೆವರೆಗೆ ವಾಹನದೊಂದಿಗೆ ಮೆರವಣಿಗೆ ಜರುಗಿತು.

ನಂತರ ನಡೆದ ಅಭಿನಂದನಾ ಸಭೆಯಲ್ಲಿ ಮಾಜಿ ಸೈನಿಕರಾದ ಮೋಹನ್ ಶೆಟ್ಟಿ, ಚೆರಿಯನ್, ಜಯಚಂದ್ರ, ಕೊಕ್ಕಡ ಗ್ರಾ. ಪಂ. ಅಧ್ಯಕ್ಷ ಯೋಗೀಶ್ ಆಲಂಬಿಲ, ಕಳೆಂಜ ಗ್ರಾ. ಪಂ. ಅಧ್ಯಕ್ಷ ಪ್ರಸನ್ನ ಎ. ಪಿ., ಅರಸಿನಮಕ್ಕಿ ಗ್ರಾ. ಪಂ. ಸದಸ್ಯ ಸುಧೀರ್ ಕುಮಾರ್, ಉದ್ಯಮಿ ರಹೀಮ್ ಮುದ್ದಿಗೆ ಮಾತನಾಡಿದರು.

ರಾಜರಾಮ ಟಿ. ಮುದ್ದಿಗೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಹತ್ಯಡ್ಕ , ಕೊಕ್ಕಡ, ಕಳೆಂಜದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Related posts

ಉಜಿರೆ ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಚೇತನರ ವಿಶೇಷ ಗ್ರಾಮ ಸಭೆ

Suddi Udaya

ಕಳೆಂಜ: ಶಿಬರಾಜೆಯಲ್ಲಿ ಒಂಟಿಸಲಗ ದಾಳಿ : ಅಪಾರ ಕೃಷಿ ನಾಶ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕದಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ವನದುರ್ಗ ದೇವಿ ಕ್ಷೇತ್ರಕ್ಕೆ ಸೋಲಾರ್ ಅಳವಡಿಸಲು ಕೆನರಾ ಬ್ಯಾಂಕಿನಿಂದ ರೂ 2 ಲಕ್ಷ ಮಂಜೂರು

Suddi Udaya

ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ ಗಣರಾಜ್ಯೋತ್ಸವ ದಿನಾಚರಣೆ

Suddi Udaya

ಬೆಳ್ತಂಗಡಿ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಇದರ ಸಹ ಘಟಕವಾದ ರಾಜಕೇಸರಿ ಬಂಟ್ವಾಳ ತಾಲೂಕು ಇದರ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!