ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಾಣಿ ಕಾಲೇಜು: ಅಕ್ಷರವಾಣಿ ಭಿತ್ತಿಪತ್ರಿಕೆ ಅನಾವರಣ

ಬೆಳ್ತಂಗಡಿ : ನಿರಂತರ ಅಧ್ಯಯನದಿಂದ ಜ್ಞಾನಗಳಿಸುವುದರೊಂದಿಗೆ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದು ಎಂದು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಹೃಷಿಕೇಶ್ ಹೇಳಿದರು.

ಅವರು ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ 2023-24ನೇ ಶೈಕ್ಷಣಿಕ ವರ್ಷದ ಅಕ್ಷರವಾಣಿ ಭಿತ್ತಿಪತ್ರಿಕೆಯನ್ನು ಅನಾವರಣ ಮಾಡಿ ಮಾತನಾಡುತ್ತಾ, ಅಕ್ಷರ ಮನುಷ್ಯನ ಮಾನಸಿಕ ಸೀಮಿತತೆಯನ್ನು ದೃಢಪಡಿಸುತ್ತದೆ. ವಿದ್ಯಾರ್ಥಿಗಳು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಈ ಮೂಲಕ ಜೀವನಾನುಭವವನ್ನು ಹಂಚಿಕೊಳ್ಳಲು ಸಾಧ್ಯವಿದೆ. ವಿದ್ಯಾರ್ಥಿಗಳ ಬರವಣಿಗೆಗೆ ಪೂರಕವಾಗಿ ದೈನಂದಿನ ಪತ್ರಿಕೆಗಳಲ್ಲಿ ವಿದ್ಯಾರ್ಥಿ ಅಂಕಣವನ್ನು ತೆರೆಯಲಾಗಿದೆ. ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದರು. ಕಾಲೇಜಿನ ಉಪಪ್ರಾಂಶುಪಾಲ ವಿಷ್ಣುಪ್ರಕಾಶ್ ಎಂ ಅಧ್ಯಕ್ಷತೆ ವಹಿಸಿದ್ದರು. ಅಕ್ಷರವಾಣಿ ಸಂಯೋಜಕಿ ಶ್ರೀಮತಿ ಸಿದ್ಧಿ ಆರ್ ಪ್ರಭು ಸ್ವಾಗತಿಸಿದರು. ಕು|ರೂಪಶ್ರೀ ಧನ್ಯವಾದವಿತ್ತರು. ಋತ್ವಿಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related posts

ನಾರಾವಿ ಬಂಟರ ವಲಯದ ಕೊಕ್ರಾಡಿ ಗ್ರಾಮ ಸಮಿತಿ ಸಭೆ

Suddi Udaya

ಇಂದಬೆಟ್ಟು : ಮಾತೃಶ್ರೀ ಮುಗೇರ ಸೇವಾ ಸಂಘದಿಂದ ಪುಸ್ತಕ ವಿತರಣೆ

Suddi Udaya

ಗುರುವಾಯನಕೆರೆ: ಮಹಿಳೆಗೆ ಜೀವಬೆದರಿಕೆ, ಹಲ್ಲೆ ಆರೋಪ: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

Leave a Comment

error: Content is protected !!