ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಹಾಗೂ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವತಿಯಿಂದ ಶ್ರೀ ಕ್ಷೇತ್ರದ ವಠಾರವನ್ನು ಸಸ್ಯಕಾಶಿಯನ್ನಾಗಿಸಲು ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಸಹಯೋಗದೊಂದಿಗೆ ಶ್ರೀ ಕ್ಷೇತ್ರದಲ್ಲಿ ಜು.6 ರಂದು ವನಮಹೋತ್ಸವ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮವನ್ನು ಶ್ರೀಕೃಷ್ಣ ಭಟ್ ಹಿತ್ತಿಲು ಉದ್ಘಾಟಿಸಿದರು.

ಸಭಾಧ್ಯಕ್ಷತೆಯನ್ನು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪಾಡಿ ವಹಿಸಿದರು.

ವೇದಿಕೆಯಲ್ಲಿ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಜಯಪ್ರಕಾಶ್ ಕೆ ಕೆ., ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಶ್ರೀ ಕೃಷ್ಣ ಭಟ್ ಹಿತ್ತಿಲು, ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಹೆಗ್ಡೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಕೊಕ್ಕಡ ವಲಯ ಶ್ರೀಮತಿ ಭಾಗಿರಥಿ , ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಆಲಂಬಿಲ, ಉಪಸ್ಥಿತರಿದ್ದರು.

ಪ್ರಾಸ್ತಾವಿಕ ವಾಗಿ ಉಪ್ಪಿನಂಗಡಿ ಉಪ ವಲಯ ಅರಣ್ಯಾಧಿಕಾರಿ ಸಂದೀಪ್ ಸಿ ಕೆ ಮಾತನಾಡಿದರು. ಗಸ್ತು ವನಪಾಲಕರಾದ ರಾಜೇಶ್ ಕೆ ಯವರು ವನಮಹೋತ್ಸವ ಕಾರ್ಯಕ್ರಮದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಗಸ್ತು ವನಪಾಲಕ ಕೊಕ್ಕಡ ಸಿ ಪ್ರಶಾಂತ್ ಮಾಳಗಿ ಯವರು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ದೇವಳದ ವಠಾರದಲ್ಲಿ ವಿವಿಧ ತಳಿಗಳ ಗಿಡಗಳನ್ನು ನೆಟ್ಟು ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ., ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಸದಸ್ಯರಾದ ದಾಮೋದರ ಶೆಟ್ಟಿ ನೂಜೆ, ಬಾಲಕೃಷ್ಣ ನೈಮಿಷ, ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಉಪಾಧ್ಯಕ್ಷೆ ಶ್ರೀಮತಿ ಪವಿತ್ರ ಗುರುಪ್ರಸಾದ್, ಸದಸ್ಯರಾದ ಪ್ರಭಾಕರಗೌಡ ಮಲ್ಲಿಗೆ ಮಜಲು, ಶ್ರೀಮತಿ ಬೇಬಿ ವಸಂತ ಶಬರಾಡಿ. ಶ್ರೀ ಪಿಲಿಚಾಮುಂಡಿ ದೇವಸ್ಥಾನ ಮಾಸ್ತಿ ಕಲ್ಲ ಮಜಲು ಆಡಳಿತ ಟ್ರಸ್ಟ್ ನ ಕುಶಾಲಪ್ಪ ಗೌಡ ಪೊಡಿಕೆತ್ತೂರು, ಪುರುಷೋತ್ತಮ ನಾಯಕ್ ಪುಡಕೆತೂರು, ಸುಂದರ ಪೂಜಾರಿ ಅಂಕದ ಮಜಲು, ಶೇಷಪ್ಪ ಮೂಲ್ಯ ಪಿಜಿನೆಡ್ಕ, ಸೇವಾ ನಿರತೆ ಶ್ರೀಮತಿ ಕುಸುಮಾ ಅಡ್ಡೆ, ವ್ಯವಸ್ಥಾಪನ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

ಕೊಕ್ಕಡ ಉಪ ವಲಯ ಅರಣ್ಯ ಅಧಿಕಾರಿ ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯ ಪುರಂದರ ಕಡೀರ ಸ್ವಾಗತಿಸಿ, ಧನ್ಯವಾದವಿತ್ತರು.


Leave a Comment

error: Content is protected !!