28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿ

ಧಮ೯ಸ್ಥಳ ಶರಾವತಿ ವಸತಿ ಗೃಹದ ಎದುರು ಅಸ್ವಸ್ಥಗೊಂಡು ಬಿದ್ದಿದ್ದ ಅಪರಿಚಿತ ವ್ಯಕ್ತಿ: ಆಸ್ಪತ್ರೆಗೆ ಸಾಗಿಸುವ ಹಂತದಲ್ಲಿ ಮೃತ್ಯು

ಧಮ೯ಸ್ಥಳ: ಶರಾವತಿ ವಸತಿ ಗೃಹದ ಎದುರಿನಲ್ಲಿ ಸುಮಾರು 60 ರಿಂದ 70 ವರ್ಷ ಪ್ರಾಯದ ಅಪರಿಚಿತ ಗಂಡಸು ಅಸ್ವಸ್ಥರಾಗಿ ಬಿದ್ದಿದ್ದು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಶರಾವತಿ ವಸತಿ ಗೃಹದ ಎದುರಿನಲ್ಲಿ ಬಿದ್ದು, ಮಾತನಾಡಲು ಕಷ್ಟವಾಗುತ್ತಿರುವುದನ್ನು ಕಂಡು ಕೂಡಲೇ ಮಾಹಿತಿ ಕಛೇರಿಯಿಂದ 108 ಅಂಬ್ಯುಲೆನ್ಸ್ ನವರಿಗೆ ಕರೆ ಮಾಡಿ 108 ಅಂಬ್ಯುಲೆನ್ಸ್ ನಲ್ಲಿ ಅಪರಿಚಿತ ವ್ಯಕ್ತಿಯನ್ನು ಬೆಳ್ತಂಗಡಿ ಸಾರ್ವಜನಿಕ ಆಸ್ಬತ್ರೆಗೆ ಕಳುಹಿಸಿಕೊಟ್ಟಿದ್ದು, ವ್ಯಕ್ತಿಯನ್ನು ಆಸ್ಬತ್ರೆಗೆ ಕರೆದುಕೊಂಡು ಹೋಗುತ್ತಿರುವ ಸಮಯ ದಾರಿ ಮಧ್ಯೆ ಮೃತ ಪಟ್ಟಿರುವುದಾಗಿದ್ದು, ಸುಮಾರು 60-70 ವರ್ಷ ಪ್ರಾಯದ ಅಪರಿಚಿತ ಗಂಡಸು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆ ಬಂದವರು ಯಾವುದೋ ಖಾಯಿಲೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಮೃತ ಪಟ್ಟಿದ್ದು, ಮೃತರ ಹೆಸರು ವಿಳಾಸ ಪತ್ತೆಯಾಗದ ಕಾರಣ ಮೃತರ ವಾರೀಸುದಾರರ ಪತ್ತೆಯ ಬಗ್ಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

Related posts

ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಸಮಾಲೋಚನೆ ಸಭೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲಾ ಮಂತ್ರಿ ಮಂಡಲ ರಚನೆ

Suddi Udaya

ಕಾಡಾನೆಗಳ ಓಡಾಟ: ಮಲವಂತಿಗೆ ಗ್ರಾಮ ಪಂಚಾಯತ್ ನಿಂದ ಎಚ್ಚರಿಕೆ

Suddi Udaya

ಜ.22: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆ

Suddi Udaya

ನಾರಾವಿ ಸಂತ ಅಂತೋನಿ ಕಾಲೇಜು ನೂತನ ಪ್ರಾಂಶುಪಾಲರಾಗಿ ಸಂತೋಷ್ ಸಲ್ಡಾನ ಅಧಿಕಾರ ಸ್ವೀಕಾರ

Suddi Udaya

ಬೆಳ್ತಂಗಡಿ: ಲಕ್ಷ್ಮೀ ಸ್ವೀಟ್ ಮತ್ತು ಕಾಂಡಿಮೆಂಟ್ಸ್ ಶುಭಾರಂಭ

Suddi Udaya
error: Content is protected !!