24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಓಡಿಲ್ನಾಳ ಮತ್ತು ಕುವೆಟ್ಟು ಗ್ರಾಮ ಸಮಿತಿಯ ತ್ರೈಮಾಸಿಕ ಸಭೆ ಹಾಗೂ ವನಮಹೋತ್ಸವ


ಓಡಿಲ್ನಾಳ : ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಓಡಿಲ್ನಾಳ ಮತ್ತು ಕುವೆಟ್ಟು ಗ್ರಾಮ ಸಮಿತಿ ಇದರ ತ್ರೈಮಾಸಿಕ ಸಭೆ ಹಾಗೂ ವನ ಮಹೋತ್ಸವ ಜು. 9 ರಂದು ಸಂಘದ ಅಧ್ಯಕ್ಷ ಗೋಪಾಲ್ ಗೌಡ ಇವರ ನೇತೃತ್ವದಲ್ಲಿ ರಾಘವೇಂದ್ರ ಗೌಡ ಇವರ ಮನೆಯಲ್ಲಿ ಜರಗಿತು.
ತಾಲೂಕು ಸಮಿತಿಯ ಉಪಾಧ್ಯಕ್ಷರಾದ ಕೃಷ್ಣಪ್ಪ ಗೌಡ ಸವಣಾಲು ಇವರು ಮಾತನಾಡಿ. ವಾಣಿ ಶಿಕ್ಷಣ ಸಂಸ್ಥೆ ಮತ್ತು ನೂತನ ಕಟ್ಟಡದ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಗೌಡ ಸಮಾಜದ ಮುಂದಿನ ದಿನಗಳಲ್ಲಿ ಮಾದರಿ ಸಮಾಜವನ್ನಾಗಿ ಬೆಳೆಸಲು ಸಹಕಾರ ನೀಡಿ ಎಂದರು. ತಾಲೂಕು ಸಮಿತಿಯ ಕೋಶಾಧಿಕಾರಿ ಬಾಲಕೃಷ್ಣ ಬಿರ್ಮೊಟ್ಟು ಸಸಿ ವಿತರಿಸಿ ಪರಿಸರದ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಚೆನ್ನಪ್ಪ ಗೌಡ, ಶಿವಪ್ಪಗೌಡ, ಉಪಾಧ್ಯಕ್ಷ ಜನಾರ್ದನ ಗೌಡ, ಜೊತೆ ಕಾರ್ಯದರ್ಶಿ ಗಣೇಶ್ ಗೌಡ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಉಪಸಿತರಿದ್ದರು.
ಬೇಬಿ ಸಾನ್ವಿ ಪ್ರಾರ್ಥನೆಯೊಂದಿಗೆ ಪುರಂದರ ಗೌಡ ಸ್ವಾಗತಿಸಿ, ಪುರಂದರ. ಕೆ. ಕಾರ್ಯಕ್ರಮ ನಿರೂಪಿಸಿ. ಶ್ರೀಕಾಂತ್ ಧನ್ಯವಾದವಿತ್ತರು.

Related posts

ಸೆ.7-9: ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

Suddi Udaya

ಉಜಿರೆ ರತ್ನಮಾನಸ ಜೀವನ ಶಿಕ್ಷಣ ವಿದ್ಯಾರ್ಥಿ ನಿಲಯದಲ್ಲಿ ರೆಸಿಡೆನ್ಸಿಯಲ್ ಕಾಲೇಜಿನ ಸಹಭಾಗಿತ್ವದೊಂದಿಗೆ ಗಾಂಧೀಜಿ ಜಯಂತಿ ಆಚರಣೆ

Suddi Udaya

ಕಣಿಯೂರು 45ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮುಂಡಾಜೆ : ಶಾಂತಿವನ – ಗಾಂಧಿಕಟ್ಟೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ಕರ್ನಾಟಕ ಮುಸ್ಲಿಂ ಜಮಾಅತ್ ಕಾಜೂರ್ ಸರ್ಕಲ್ : ಪ್ರಜಾಭಾರತ ಸಂಗಮ

Suddi Udaya
error: Content is protected !!