ಉಜಿರೆ : “ಜನಸಂಖ್ಯೆ ನಿಯಂತ್ರಣದ ಹೊರತು ಅಭಿವೃದ್ಧಿ ಅಸಾಧ್ಯ, ಅಭಿವೃದ್ಧಿಯ ಮೂಲ ಬೇರು ಜನಸಂಖ್ಯೆ. ನಮಗಿರುವ ನೈಸರ್ಗಿಕ ಸಂಪನ್ಮೂಲಗಳು ಮಿತವಾಗಿದೆ, ಜನಸಂಖ್ಯೆ ಅಮಿತವಾಗಿದೆ ಅದನ್ನು ಮಿತಗೊಳಿಸುವ ಕಡೆಗಿರಲಿ ನಮ್ಮ ನಡೆ” ಎಂದು ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯ ನಿವೃತ್ತ ಪ್ರಾಂಶುಪಾಲರಾದ ಡಾ. ಅಂತೋನಿ ಟಿ. ಪಿ ಹೇಳಿದರು.
ಇವರು ಶ್ರೀ. ಧಂ. ಮಂ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಜು.11 ರಂದು ನಡೆದ ‘ವಿಶ್ವ ಜನಸಂಖ್ಯಾ ದಿನ’ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಜನಸಂಖ್ಯಾ ನಿಯಂತ್ರಣದ ಕುರಿತಾಗಿ ಸಂಗೀತ, ನೃತ್ಯ ಹಾಗೂ ಕಿರು ಪ್ರಹಸನ ಪ್ರದರ್ಶಿಸಲಾಯಿತು.
ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯಕ್ ಮತ್ತು ಶಿಕ್ಷಕಿ ಶಾಂಟಿ ಜಾರ್ಜ್ ಉಪಸ್ಥಿತರಿದ್ದರು.
ಶಿಕ್ಷಕಿ ಶೋಭಿತ ಸಂಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಇಶಿಕ.ಕೆ ಪ್ರಕಾಶ್ ನಿರೂಪಣೆ ಮತ್ತು ಸ್ವಾಗತಿಸಿ, ವಿದ್ಯಾರ್ಥಿ ತೇಜಸ್ ವಂದಿಸಿದರು.