32.2 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಿಲ್ಲು ಇಲ್ಲದೆ ಅಡಿಕೆ ಸಾಗಾಟ ವಾಹನ ವಶಕ್ಕೆ: ವಾಣಿಜ್ಯ ತೆರಿಗೆ ಇಲಾಖೆಯಿಂದ ದಂಡ

ಬೆಳ್ತಂಗಡಿ : ಸುಲಿದ ಒಣ ಅಡಕೆಯನ್ನು ವಾಣಿಜ್ಯ ತೆರಿಗೆಇಲಾಖೆಯ ಬಿಲ್ಲು ಇಲ್ಲದೆ ಸಾಗಾಟ ಮಾಡುತ್ತಿದ್ದಾಗ ಧರ್ಮಸ್ಥಳಧಮ೯ಸ್ಥಳ ಪೊಲೀಸರ ತಂಡ ತಪಾಸಣೆ ವೇಳೆ ವಾಹನವನ್ನು ಪತ್ತೆ ಹಚ್ಚಿ ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದೆ.ಅಡಕೆ ಮತ್ತು ವಾಹನವಕ್ಕೆ ಇಲಾಖೆ ದಂಡ ವಿಧಿಸಿದೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಡಿ ಮತ್ತು ಸಿಬ್ಬಂದಿಗಳು ಕರ್ತವ್ಯದಲ್ಲಿರುವಾಗ ಜು. 12 ರಂದು ಬೆಳಗ್ಗೆ 11 ಗಂಟೆಗೆ ಮುಂಡಾಜೆ ಗ್ರಾಮದ ಪರಶುರಾಮ ರಾಮ ದೇವಸ್ಥಾನದ ಕ್ರಾಸ್ ಬಳಿ ಅಶೋಕ್ ಲೈಲಾಂಡ್ ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರೊಳಗೆ ಸುಲಿದ ಒಣ ಅಡಿಕೆ ಇದ್ದು ಇದರ ಚಾಲಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶಾಬೀರ್ ಎಂಬವರನ್ನು ವಿಚಾರಿಸಿದಾಗ ಸುಳ್ಯದ ಅಡಕೆ ಅಂಗಡಿಯಿಂದ ಪಡೆದುಕೊಂಡು ಕಡೂರಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಬಿಲ್ಲು / ದಾಖಲಾತಿ ಕೇಳಿದಾಗ ಬಿರೂರು ಅಜ್ಜಂಪುರ ರಸ್ತೆಯಲ್ಲಿರುವ ನಿದಾ ಟ್ರೇಡರ್ಸ್ ಸಂಬಂಧಿಸಿದ ಚೀಟಿಗಳನ್ನು ಸಲ್ಲಿಸಿದ್ದು. ಬೇರೆ ಯಾವುದೇ ಬಿಲ್ಲುಗಳಿಲ್ಲ ಎಂದು ತಿಳಿಸಿದ್ದಾರೆ. ವಾಹನ ಅಡಿಕೆ ಹಾಗೂ ಚಾಲಕನನ್ನು ಧರ್ಮಸ್ಥಳ ಪೊಲೀಸ್ ಠಾಣಾ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲು ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು ಜಾರಿ, ಪಶ್ಚಿಮ ವಲಯ ಮಂಗಳೂರು ವರದಿ ನೀಡಿದ್ದು ಅದರಂತೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ 81,900 ರೂಪಾಯಿ ದಂಡ ವಿಧಿಸಲಾಯಿತು.

Related posts

ಕಲ್ಲೇರಿ ಶಾಖಾ ವ್ಯಾಪ್ತಿಯ ವಿದ್ಯುತ್ ನಿಲುಗಡೆ

Suddi Udaya

ಕ್ಲಸ್ಟರ್ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಎಸ್ ಡಿ ಎಂ ಬೆಳ್ತಂಗಡಿಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಬಳಂಜ ದೇವಸ್ಥಾನದ ಜಾತ್ರ ಮಹೋತ್ಸವ ಸಂಪನ್ನ: ದೈವ ದೇವರ ಭೇಟಿ

Suddi Udaya

ಗುರಿಪಳ್ಳ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗಿಡನಾಟಿ, ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ಶಿಶಿಲ : ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪೌಷ್ಟಿಕ ಆಹಾರ ಸಿರಿ ಧಾನ್ಯ ಬಳಕೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಅಯೋಧ್ಯೆ ಯಾತ್ರೆ

Suddi Udaya
error: Content is protected !!