ನೇರ ನಗದು ವರ್ಗಾವಣೆ: ಬ್ಯಾಂಕ್ ಖಾತೆ ಸಕ್ರಿಯಗೊಳಿಸಲು ಸೂಚನೆ

Suddi Udaya

ಬೆಳ್ತಂಗಡಿ: ಸರ್ಕಾರದ ಮಹತ್ವಾಕಾಂಕ್ಷಿ ಅನ್ನ ಭಾಗ್ಯ ಯೋಜನೆಯಡಿ 2023ರ ಜುಲೈನಿಂದ ನೇರ ನಗದು ವರ್ಗಾವಣೆಯ ಮೂಲಕ ಅಂತ್ಯೋದಯ (3ಕ್ಕಿಂತ ಹೆಚ್ಚಿನ ಸದಸ್ಯರಿರುವ ಅಂತ್ಯೋದಯ ಪಡಿತರ ಚೀಟಿಗಳು) ಹಾಗೂ ಆದ್ಯತಾ ಪಡಿತರ ಚೀಟಿಯ ಯಜಮಾನನ ಖಾತೆಗೆ ಜಮೆ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯ 2,15,322 ಪಡಿತರ ಚೀಟಿಗಳಿಗೆ 15.02ಕೋಟಿ ರೂ.ಗಳು ಬಿಡುಗಡೆಯಾಗಿದೆ.
ಜಮೆ ಕುರಿತ ಮಾಹಿತಿಗೆ https://ahara.kar.nic.in/lpg/ ಲಿಂಕ್ ಪರಿಶೀಲಿಸಬಹುದು. ಜಿಲ್ಲೆಯಲ್ಲಿನ 37,801 ಪಡಿತರ ಚೀಟಿಗಳ ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಂಡಿದ್ದು, ಇಂತಹ ಪಡಿತರ ಚೀಟಿದಾರರು ತಮ್ಮ ಬ್ಯಾಂಕ್ ಖಾತೆಯನ್ನು ಇದೇ ಜುಲೈ20 ರೊಳಗೆ ಸಕ್ರಿಯಗೊಳಿಸಿದಲ್ಲಿ 2023ರ ಆಗಸ್ಟ್ ಮಾಹೆಯಲ್ಲಿ ನಗದು ವರ್ಗಾವಣೆಗೆ ಅರ್ಹರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.

Leave a Comment

error: Content is protected !!