24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿನಿಧನ

ಪುಂಜಾಲಕಟ್ಟೆ ಯುವಕ ಸೈನೇಡ್ ಸೇವಿಸಿ ಆತ್ಮಹತ್ಯೆ

ಪುಂಜಾಲಕಟ್ಟೆ: ಯುವಕನೋರ್ವ ಸೈನೇಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆಯಲ್ಲಿ ಜು.13 ರಂದು ಸಂಭವಿಸಿದೆ.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ನಿವಾಸಿ ಗಣೇಶ ಆಚಾರ್ಯ ರವರ ಪುತ್ರ ರೂಪೇಶ್ ಆಚಾರ್ಯ(31ವ.)ರವರು ಮೃತಪಟ್ಟ ವ್ಯಕ್ತಿ.


ಸ್ವರ್ಣ ಕುಸುರಿ ಕೆಲಸಗಾರರಾಗಿದ್ದ ರೂಪೇಶ್ ಅವರು ಸ್ಥಳೀಯ ಸಂಸ್ಥೆಯಲ್ಲಿ ನೌಕರರಾಗಿದ್ದು, ಇತ್ತೀಚೆಗೆ ಕೆಲಸ ಬಿಟ್ಟಿದ್ದರು. ಮದ್ಯವ್ಯಸನಿಯಾಗಿದ್ದ ಅವರು ಗುರುವಾರ ಮಧ್ಯಾಹ್ನ ತನ್ನ ಕೊಠಡಿಯಲ್ಲಿ ಸೈನೇಡ್ ಸೇವಿಸಿದ್ದರು. ಇದನ್ನು ಗಮನಿಸಿದ ಮನೆ ಮಂದಿ ಕೂಡಲೇ ಅಂಬ್ಯುಲೆನ್ಸ್ ಮೂಲಕ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದರಾದರೂ ಅಲ್ಲಿ ಅವರು ಮೃತಪಟ್ಟಿದ್ದರು.

ಗಣೇಶ್ ಅವರ ಮೂವರು ಮಕ್ಕಳಲ್ಲಿ ಹಿರಿಯವನಾಗಿದ್ದ ರೂಪೇಶ್ ವಿವಾಹಿತನಾಗಿದ್ದು, ಪತ್ನಿ, ಪುಟ್ಟ ಮಗುವನ್ನು ಅಗಲಿದ್ದಾರೆ.

Related posts

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

Suddi Udaya

ನೆಲ್ಯಾಡಿಯಲ್ಲಿ ಉದನೆ ವಲಯ ಮಟ್ಟದ ಮಾತೃಸಂಗಮ ‘ಫಿದೆಲಿಯುಂ–2026’

Suddi Udaya

ನಗರ ಪಂಚಾಯತದ ಒಳಚರಂಡಿಗೆ ಬಿದ್ದ ದನ: ಅಗ್ನಿಶಾಮಕದವರ ಸಹಕಾರದಿಂದ ಮೇಲಕ್ಕೆ

Suddi Udaya

ಕರಾಯ: ಖಂಡಿಗ ನಿವಾಸಿ ಅಣ್ಣಿ ಗೌಡ ನಿಧನ

Suddi Udaya

ಪಡಂಗಡಿ: ಕಾಂಗ್ರೆಸ್ ಕಾರ್ಯಕರ್ತ ನಝೀರ್ ಬಿಜೆಪಿ ಸೇರ್ಪಡೆ

Suddi Udaya

ಶಿಲಾ೯ಲು ಗ್ರಾಮ ಸಭೆಯಲ್ಲಿ ಹೊಡೆದಾಟ: ಇತ್ತಂಡಗಳಿಂದ ವೇಣೂರು ಪೊಲೀಸರಿಗೆ ದೂರು – ಪ್ರಕರಣ ದಾಖಲು

Suddi Udaya
error: Content is protected !!