ತೋಟತ್ತಾಡಿ: ನೆರಿಯ ವಲಯದ ಭಜನಾ ಪರಿಷತ್ ಸಭೆಯನ್ನು, ವಲಯ ಕಛೇರಿ ತೋಟತ್ತಾಡಿಯಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಚಂದ್ರಶೇಖರ ಸಾಲಿಯಾನ್ ರವರು ಕಾರ್ಯಕ್ರಮದ ಉದ್ದೇಶ, ಮೂಲಭೂತ ಸೌಕರ್ಯಗಳ ಬಗ್ಗೆ, 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಸೇರುವ ಬಗ್ಗೆ, ನಮ್ಮ ಸಂಪ್ರದಾಯದಲ್ಲಿ ಭಜನೆಗೆ ಇರುವ ಮಹತ್ವದ ಬಗ್ಗೆ ಸವಿವಾರವಾಗಿ ಮಾಹಿತಿಯನ್ನು ನೀಡಿದರು.
ಭಜನಾ ಪರಿಷತ್ ತಾಲೂಕು ಅಧ್ಯಕ್ಷರಾದ ವೆಂಕಟೇಶ್ ಭಟ್ ರವರು ಪೂಜ್ಯಖಾವಂದರಿಗೆ ಭಜನಾ ಮಂಡಳಿಗಳ ಮೇಲೆ ಇರುವ ಅಭಿಮಾನದ ಬಗ್ಗೆ, ವಲಯದಲ್ಲಿ ಮುಂದಿನ ದಿನಗಳಲ್ಲಿ ಭಜನಾ ಮಂಡಳಿಗಳು ಒಗ್ಗಟ್ಟಿನಲ್ಲಿ ಇದ್ದು ಉತ್ತಮವಾಗಿ ಸಂಘಟನೆಯನ್ನು ಮಾಡಿ ನಮ್ಮ ಬೆಳ್ತಂಗಡಿ ತಾಲೂಕಿನಲ್ಲಿ ಭಜನಾಪರಿಷತ್ ಪ್ರಥಮ ಸ್ಥಾನದಲ್ಲಿ ಬರುವ ಹಾಗೆ ಮಾಡುವಲ್ಲಿ ನಾವೆಲ್ಲರೂ ಪ್ರಯತ್ನ ಪಡೋಣ ಎಂದು ಶುಭವನ್ನು ಹಾರೈಸಿದರು.
ಸಭೆಯಲ್ಲಿ ವಲಯ ಭಜನಾ ಪರಿಷತ್ ಸಂಚಾಲಕರಾದ ಪಿ.ಕೆ ರಾಜನ್, ವಲಯಧ್ಯಕ್ಷರಾದ ಸತೀಶ್, ವಲಯ ಮೇಲ್ವಿಚಾರಕರಾದ ರಾಜೇಶ್, ವಲಯದ ಎಲ್ಲಾ ಭಜನಾ ಪರಿಷತ್ ನ ಪದಾಧಿಕಾರಿಗಳು ಮತ್ತು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು .