23.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡೂರು ದುರ್ಗಾನಗರ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಬೆಳ್ತಂಗಡಿ: ಮುಂಡೂರು ದುರ್ಗಾನಗರ ಹಾಲು ಉತ್ಪಾದಕರ ಸಹಕಾರ ಸಂಘ ಇದರ 2022-23 ನೇ ವಾರ್ಷಿಕ ಸಾಮಾನ್ಯ ಸಭೆಯು ಜು.14 ರಂದು ಸಂಘದ ಅಧ್ಯಕ್ಷರಾದ ಯಾದವ ಕುಲಾಲ್ ರವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ನಡೆಯಿತು.

ದ.ಕ. ಹಾಲು ಒಕ್ಕೂಟ ಮಂಗಳೂರು ಇದರ ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜೆ ಮುಖ್ಯ ಅತಿಥಿಯಾಗಿ ಸಂಘದ ಅಭಿವೃದ್ಧಿ ಬಗ್ಗೆ ಉತ್ತಮವಾದ ಸಲಹೆಯನ್ನು ನೀಡಿದರು.

ದ.ಕ. ಹಾಲು ಒಕ್ಕೂಟ ಇದರ ಸಹಾಯಕ ವ್ಯವಸ್ಥಾಪಕರಾದ ಡಾ. ಗಣಪತಿ ಇವರು ಹೈನುಗಾರಿಕೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಹಾಗೂ ದ.ಕ. ಹಾಲು ಒಕ್ಕೂಟ ಬೆಳ್ತಂಗಡಿ ಇದರ ವಿಸ್ತರಣಾಧಿಕಾರಿಯಾದ ಸುಚಿತ್ರಾರವರು ಹೆಣ್ಣು ಕರು ಸಾಕಾಣಿಕೆ ಯೋಜನೆ ಬಗ್ಗೆ ಮಾಹಿತಿಯನ್ನು ನೀಡಿದರು.

ಸಂಘದಲ್ಲಿ ಅತಿ ಹೆಚ್ಚು ಹಾಲು ಹಾಕಿರುವ ಸದಸ್ಯರನ್ನು ಗುರುತಿಸಿ ಪ್ರಥಮ ಬಹುಮಾನವನ್ನು ರಾಜೀವ್ ಸುವರ್ಣರವರಿಗೆ ಸಂಘದ ಅಧ್ಯಕ್ಷರು ನೀಡಿದರು. ದ್ವಿತೀಯ ಬಹುಮಾನವನ್ನು ರೋಷನ್ ಡಿಸೋಜಾ ಇವರಿಗೆ ಸಂಘದ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಅವರು ನೀಡಿದರು.

ಸಂಘದ ಅಧ್ಯಕ್ಷ ಯಾದವ್ ಕುಲಾಲ್ ರವರು ಸಂಘದ ಏಳಿಗೆಗೆ ಸಹಕಾರ ನೀಡುವಂತೆ ಮತ್ತು ಹಾಲಿನ ಗುಣಮಟ್ಟವನ್ನು ಕಾಪಾಡುವಂತೆ ತಿಳಿಸಿದರು.

ಸಂಘದ ಉಪಾಧ್ಯಕ್ಷ ಸಂತೋಷ್ ಕುಮಾರ್ ಸ್ವಾಗತಿಸಿದರು.ಸಂಘದ ಕಾರ್ಯದರ್ಶಿಯಾದ ಅರುಣ ಹಾಗೂ ರೇವತಿ ಪ್ರಾರ್ಥಿಸಿದರು.ಸಂಘದ ನಿರ್ದೇಶಕ ಚಾಮರಾಜ ಸೇಮಿತ ವಂದಿಸಿದರು.

Related posts

ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ರಥೋತ್ಸವ

Suddi Udaya

ಇಂದು (ಜು.17) ಬಳಂಜ ಶಿವಾಜಿ ಪ್ರೆಂಡ್ಸ್ ಕ್ಲಬ್ ನೇತಾಜಿನಗರ ಇವರ ವತಿಯಿಂದ ತಾಳ ಮದ್ದಳೆ ಮತ್ತು ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ

Suddi Udaya

ಶಿಶಿಲ: ರಥಬೀದಿ ನಿವಾಸಿ ಕುಸುಮಾವತಿ ನಿಧನ

Suddi Udaya

ಉಜಿರೆ ಶ್ರೀ ಧ.ಮಂ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್‌ ಸಯನ್ಸ್‌ ಉಪನ್ಯಾಸಕಿ ಸುಚೇತಾರವರಿಗೆ ಪಿ.ಎಚ್.ಡಿ ಪದವಿ

Suddi Udaya

ಕುತ್ಲೂರು: ಮಂಜುಶ್ರೀ ಭಜನಾ ಮಂಡಳಿಯಿಂದ 29ನೇ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಸತ್ಯನಾರಾಯಣ ಪೂಜೆ

Suddi Udaya

ಜೆಸಿಐ ಬೆಳ್ತಂಗಡಿಯ ಪೂರ್ವ ಅಧ್ಯಕ್ಷ ಪೃಥ್ವಿರಂಜನ್ ರಾವ್ ರವರಿಗೆ ನುಡಿ ನಮನ

Suddi Udaya
error: Content is protected !!