ತಣ್ಣೀರುಪಂತ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಎರಡನೇ ಆಯ್ಕೆಯಾದ ಹರೀಶ್ ಪೂಂಜರಿಗೆ ಹಾಗೂ ಸನಾತನ ಹಿಂದೂ ಧರ್ಮದ ಅಳಿವು ಉಳಿವಿಗಾಗಿ ಸದಾ ಸ್ಪಂದಿಸುತ್ತಿರುವ ನಾಯಕ ಅರುಣ್ ಕುಮಾರ್ ಪುತ್ತಿಲರಿಗೆ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ಅಭಿವೃದ್ಧಿ ಸಮಿತಿ ಅಭಿಮಾನಿ ಬಳಗ ಹಾಗೂ ಊರಿನ ಸಮಸ್ತ ಬಂಧುಗಳು ವತಿಯಿಂದ ಅಭಿನಂದನಾ ಕಾರ್ಯಕ್ರಮವು ಜು.16ರಂದು ರುದ್ರಗಿರಿ ಶ್ರೀ ಮೃತ್ಯುಂಜಯ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭರತ್ ಕುಮಾರ್ ಕೇರಿ, ಗೌರವಾಧ್ಯಕ್ಷ ಮಾಧವ ಜೋಗಿತ್ತಯ, ಉದ್ಯಮಿ ಕಿರಣ್ ಪುಷ್ಪಗಿರಿ, ಮಹೇಶ್ ಕೋಟ್ಯಾನ್ ಜೆಂಕ್ಯಾರು, ಪ್ರಭಾಕರ ಪೊಸಂದೋಡಿ ಹಾಗೂ ಶಕ್ತಿ ಕೇಂದ್ರದ ಪದಾಧಿಕಾರಿಗಳು ಸದಸ್ಯರು, ಊರಿನವರು ಉಪಸ್ಥಿತರಿದ್ದರು.