ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣ ಘಟಕ ತಣ್ಣೀರುಪoತ ವಲಯ ಸದಸ್ಯರಿಂದ ವಿವಿಧ ಜಾತಿಯ ಹಣ್ಣು ಹಂಪಲು ಗಿಡ ನಾಟಿ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಹರ್ಷ ಸಂಪಿಗೆತ್ತಾಯ, ಮಡಂತ್ಯಾರು ಮೇಲ್ವಿಚಾರಕರ ವಸಂತ ಕುಮಾರ್, ಸೇವಾಪ್ರತಿನಿಧಿ ಶ್ರೀಮತಿ ಹೇಮಾಲತಾ, ಪರಮೇಶ್ವರ ಘಟಕ ಸದಸ್ಯರಾದ ವೇದಶ್ರೀ, ಭಾರತಿ, ಸಂದೀಪ್ ಕುಂದರ್, ಗೋಪಾಲ ಕುಲಾಲ್, ಹೊನ್ನಪ್ಪ ಕುಲಾಲ್, ಹರೀಶ್ ಪ್ರಭು, ಪ್ರಭಾಕರ ಪೂಜಾರಿ ಮುದಲಡ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.