ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿಶ್ವ ಹಿಂದೂ ಪರಿಷತ್ ಇಂದಬೆಟ್ಟು-ನಾವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

ಇಂದಬೆಟ್ಟು: ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ 25 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಭೆಯು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರುಗಳಾದ ಚಂದ್ರಶೇಖರ ಕಾಂಜಾನು ಹಾಗೂ ವಿಜಯ ಕೆ ಹೊಡಿಕ್ಕಾರು ಇವರ ಜಂಟಿ ಅಧ್ಯಕ್ಷತೆಯಲ್ಲಿ ಜು.21 ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.

25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಅಧ್ಯಕ್ಷರಾಗಿ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬೆಳ್ಳೂರು ಗುತ್ತು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಡಾಕ್ಟರ್ ಪ್ರದೀಪ್ ನಾವೂರು, ಉಪಾಧ್ಯಕ್ಷರಾಗಿ ಹರೀಶ್ ಸಾಲ್ಯಾನ್ ಮೋರ್ತಾಜೆ, ಸತೀಶ್ ಗೌಡ ಬೆದ್ರಬೆಟ್ಟು, ಕೆ.ಮೋಹನ್ ಬಂಗೇರ ಕಾರಿಂಜ, ರಮೇಶ್ ಕೆಂಗಾಜೆ, ಕೆ.ಧರ್ಣಪ್ಪ ಮೂಲ್ಯ ನಾವೂರು, ಮಂಜುನಾಥ ಗೌಡ ಹೆಬ್ಬಾರಪಲ್ಕೆ, ಪಳನಿ ಸ್ವಾಮಿ ಪಿ.ಆರ್. ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಗೌಡ ನಾವೂರು, ಕಾರ್ಯದರ್ಶಿಗಳಾಗಿ ಪಿ.ವಿನೋದ್ ಪ್ರಸಾದ್ ಕಲ್ಲಾಜೆ, ಶ್ರೀಧರ ಮುಗೇರ ನೇತ್ರಾವತಿ ನಗರ, ಹರೀಶ್ ಬಂಗೇರ ನಾವೂರು, ಶಶಿಧರ ಗೌಡ ಪಡೆಂಕ್ಕಲ್, ಕೋಶಾಧಿಕಾರಿಯಾಗಿ ಸಂತೋಷ್ ಎಂ ಬೆದ್ರಬೆಟ್ಟು ಹಾಗೂ ವಿವಿಧ ಉಪ ಸಮಿತಿಗಳಿಗೆ ಸಂಚಾಲಕರು, ಸಹ ಸಂಚಾಲಕರು, ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದು ವಿಜ್ರಂಭಣೆಯ 25ನೇ ವರ್ಷದ ಗಣೇಶೋತ್ಸವ ಆಚರಣೆಗೆ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದರು. ಪ್ರದೀಪ್ ನಾಗಾಜೆ ಸ್ವಾಗತಿಸಿ, ಪಿ.ವಿನೋದ್ ಪ್ರಸಾದ್ ಕಲ್ಲಾಜೆ ಧನ್ಯವಾದವಿತ್ತರು.

Related posts

ಕನ್ಯಾಡಿ 2 ಸ.ಉ. ಹಿ. ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರದ ಪ್ರಯುಕ್ತ ಉಚಿತ ದಂತ ತಪಾಸಣೆ

Suddi Udaya

ವೇಣೂರು: ಕಲ್ಲು ಬಸದಿ ನಿವಾಸಿ ವಾಗೀಶ್ವರಿ ಇಂದ್ರ ನಿಧನ

Suddi Udaya

ರಾತ್ರಿ ವೇಳೆ ಖಾಸಗಿ ಬಸ್‌ಗಳ ಅಜಾಗರೂಕ ಚಾಲನೆ; ಪೊಲೀಸ್ ಠಾಣೆಗೆ ಯುವ ಕಾಂಗ್ರೇಸ್ ಗ್ರಾಮೀಣ ಬ್ಲಾಕ್ ಉಪಾಧ್ಯಕ್ಷ ಯತೀಶ್ ಧರ್ಮಸ್ಥಳ ದೂರು

Suddi Udaya

ಬೆಂಗಳೂರು ಟೆಕ್ಸಸ್ ಕಂಪನಿ ಯಿಂದ ಇಂದಬೆಟ್ಟು ಸ.ಹಿ.ಪ್ರಾ. ಶಾಲೆಗೆ ಕಲಿಕಾ ಸಾಮಾಗ್ರಿ ವಿತರಣೆ

Suddi Udaya

ಆ.18: ದೇಶವ್ಯಾಪಿ ಕಾರ್ಮಿಕ ಪ್ರತಿಭಟನೆ: ಬೆಳ್ತಂಗಡಿ ತಾಲೂಕಿನ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು: ಅನಿಲ್ ಕುಮಾರ್ ಯು

Suddi Udaya

ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ 64ನೇ ವರ್ಷದ ಶ್ರೀರಾಮ ನಾಮ ಸಪ್ತಾಹದ ಉದ್ಘಾಟನೆ:

Suddi Udaya
error: Content is protected !!