ಶಿರ್ಲಾಲು: ಬೆಳ್ತಂಗಡಿ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಶಿರ್ಲಾಲುವಿನ ರಾಜಶ್ರೀ ಜಗದೀಶ್ ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡುವ ಮೂಲಕ ಮೆಚ್ಚುಗೆಯನ್ನು ಪಡೆದಿದ್ದಾರೆ.
ಕ್ಯಾನ್ಸರ್ ಪೀಡಿತರಿಗೆ ತನ್ನ ನೀಳವಾದ ಕೂದಲನ್ನು ಕತ್ತರಿಸಿ ಕೇಶದಾನ ಮಾಡಬೇಕೆಂದು ಕಳೆದ ಒಂದು ವರ್ಷದಿಂದ ಕನಸು ಕಂಡಿದ್ದರು. ಇದೀಗ ಮಂಗಳೂರಿನ ಯುವಶಕ್ತಿ ಸೇವಾಪಥ ಸಂಸ್ಥೆಯ ಮೂಲಕ ಕ್ಯಾನ್ಸರ್ ಪೀಡಿತರ ನೆರವಿಗಿರುವ ಸಂಸ್ಥೆಯೊಂದಕ್ಕೆ ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡುವ ಮೂಲಕ ಎಲ್ಲರ ಗಮನ ಸಳೆಯುತ್ತಿದ್ದಾರೆ. ಬೆಳ್ತಂಗಡಿಯಲ್ಲಿ ಹೆಚ್ಚಿನ ಯುವ ಮನಸ್ಸುಗಳು ಇಂತಹ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ರಾಜಶ್ರೀ ಅವರ ಅಭಿಪ್ರಾಯ: ನಾನು ಮಗುವಿನಂತೆ ಹಾರೈಕೆ ಮಾಡಿಕೊಂಡು ಬೆಳೆಸಿದ ತಲೆಕೂದಲನ್ನು ನನಗೆ ಮಗುವಾದಾಗ ಕ್ಯಾನ್ಸರ್ ಪೀಡಿತರಿಗೆ ನೀಡಬೇಕೆಂದು ಕನಸು ಕಂಡಿದ್ದೇನೆ. ಸಮಾಜದಲ್ಲಿ ಅಶಕ್ತರಿಗೆ ಸಹಾಯ ಮಾಡಲು ನಮ್ಮಲ್ಲಿ ಹಣ ಬೇಕೆಂದೇನೂ ಇಲ್ಲ ಈ ರೀತಿಯಾಗಿಯೂ ಸಮಾಜಸೇವೆ ಮಾಡಬಹುದು ಎಂಬುದು ನನ್ನ ಅಭಿಪ್ರಾಯ. ಇದಕ್ಕೆ ನನಗೆ ನನ್ನ ಪತಿ, ಅಪ್ಪ ಮತ್ತು ಅಣ್ಣಂದಿರ ಪೂರ್ಣ ಬೆಂಬಲದಿಂದ ಈ ಸಣ್ಣ ಪುಣ್ಯದ ಕಾರ್ಯವನ್ನು ಮಾಡುವಂತಾಯಿತು.