24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಗಿಡ ನಾಟಿ ಉತ್ಸವ

ಬೆಳ್ತಂಗಡಿ : ರೋಟರಿ ಕ್ಲಬ್ ಇದರ ವನಸಿರಿ ಕಾರ್ಯಕ್ರಮದಲ್ಲಿ ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ರೋಟರಿ ಮಂಗಳೂರು ಡೌನ್ ಟೌನ್, ಮುಂಡಾಜೆ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್, ರೇಂಜರ್ಸ್, ರೋವರ್ಸ್ ತಂಡಗಳ ಸಹಕಾರದಲ್ಲಿ ಗಿಡ ನಾಟಿ ಹಾಗೂ ಬಿತ್ತೋತ್ಸವ ನಡೆಸಲಾಯಿತು. ಜು.16 ರಂದು ನಡೆಯಿತು.

ಹತ್ತು ಬಗೆಯ ವಿವಿಧ ಹಣ್ಣುಗಳ 100 ಗಿಡಗಳ ನಾಟಿ ಹಾಗೂ 25,000ಕ್ಕೂ ಅಧಿಕ ಬೀಜಗಳನ್ನು ಬಿತ್ತಲಾಯಿತು.

ರೋಟರಿ ಜಿಲ್ಲಾ ಕಾರ್ಯದರ್ಶಿ (ತರಬೇತಿ) ಹರೀಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅನಂತ ಭಟ್, ಕಾರ್ಯದರ್ಶಿ ವಿದ್ಯಾ ಕುಮಾರ್, ಕುಲಸಚಿವರು ಶ್ರೀಕಾಂತ್ ಕಾಮತ್, ಧನಂಜಯ ರಾವ್, ಶ್ರೀಧರ್, ಪ್ರಕಾಶ್ ನಾರಾಯಣ್, ಕುಲಪತಿ ಡಾ. ರೋ. ಕಿರಣ್ ಹೆಬ್ಬಾರ್, ರೋ. ವಿವೇಕ್ ಸಂಪತ್ ಅರಿಗ, ರೋ. ನಾರಾಯಣ ಭಿಡೆ, ರೋ. ಉದಯಶಂಕರ್, ರೋ. ಅಬೂಬಕ್ಕರ್ & Anns, Annets, ರೋಟರಿ ಮಂಗಳೂರು ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು, ಅರಣ್ಯ ವೀಕ್ಷಕರು ಉಪಸ್ಥಿತರಿದ್ದರು.

150ಕ್ಕೂ ಅಧಿಕ ಭತ್ತದ ತಳಿಗಳ ಸಂರಕ್ಷಣೆ ಮಾಡಿರುವ ಹಿರಿಯ ಕೃಷಿಕ ಮಿತ್ತಬಾಗಿಲಿನ ದೇವರಾಜ್ ಬಿ.ಕೆ. ಅವರನ್ನು ಗೌರವಿಸಲಾಯಿತು.

Related posts

ಅ.15-ಡಿ.31: ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಫೆಸ್ಟಿವಲ್ ಮೆಗಾ ಡಿಸ್ಕೌಂಟ್ ಆಫರ್, ಪ್ರತಿ ಖರೀದಿ ಮೇಲೆ ಶಾಪಿಂಗ್ ವೊಚರ್, ರೂ10 ಸಾವಿರಕ್ಕಿಂತ ಹೆಚ್ಚಿನ ಖರೀದಿಗೆ ಶೇ 20 ರಿಯಾಯಿತಿ ಹಾಗೂ ವಿಶೇಷ ಉಡುಗೊರೆ

Suddi Udaya

ಬೆಳ್ತಂಗಡಿ: ಭುಡ್ಣಾರು ಶಕುಂತಲಾ ಶೆಟ್ಟಿ ನಿಧನ

Suddi Udaya

ಅಂಡಿಂಜೆ: ಕಲ್ಲತ್ತಿ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಗೇರು ಗಿಡಗಳಿಗೆ ಹತ್ತಿಕೊಂಡ ಬೆಂಕಿ

Suddi Udaya

ಧರ್ಮಸ್ಥಳ ಗ್ರಾ.ಪಂ. ವತಿಯಿಂದ ನಿವೃತ್ತ ಸರಕಾರಿ ಅಧಿಕಾರಿಗಳಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಲ್ಯಾನ್ಸಿ ಫೆರ್ನಾಂಡಿಸ್ ಇಸ್ರೇಲ್ ನಲ್ಲಿ ನಿಧನ

Suddi Udaya

ಬೆಳ್ತಂಗಡಿ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ

Suddi Udaya
error: Content is protected !!