ಬೆಳ್ತಂಗಡಿ: ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿಯಲ್ಲಿ ಸುಮಾರು 10 ಕಸದ ಬುಟ್ಟಿಗಳನ್ನು ವಿತರಿಸುವ ಕಾರ್ಯಕ್ರಮ ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಜು.21 ರಂದು ನಡೆಯಿತು.
ಲಾಯಿಲ ಗ್ರಾ.ಪಂ ಅಧ್ಯಕ್ಷೆ ಆಶಾ ಬೆನೆಡಿಕ್ಟ್ ಅವರಿಗೆ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಶಂಕರ್ ರಾವ್ ಕಸದ ಬುಟ್ಟಿಗಳನ್ನು ಹಸ್ತಾಂತರಿಸಿದರು.
ಜೆಸಿಐ ಬೆಳ್ತಂಗಡಿ ಮಂಜುಶ್ರೀ ಹಲವಾರು ಸಮಾಜಮುಖಿ ಕೆಲಸಕಾರ್ಯಗಳನ್ನು ಮಾಡುತ್ತಿರುವುದನ್ನು ಗಮನಿಸಿದ್ದೇನೆ. ಸದೃಢ ಭಾರತದ ಕಲ್ಪನೆಗೆಯುವ ಮನಸ್ಸುಗಳ ಕೊಡುಗೆ ಅಪಾರ. ಜೆಸಿಐ ನಡೆಸುತ್ತಿರುವ ಪ್ರತಿಯೊಂದು ಉತ್ತಮ ಕೆಲಸಕ್ಕೆ ಪಂಚಾಯತ್ ಸದಾ ಸಹಕರಿಸಲಿದೆ ಎಂದು ಗ್ರಾ.ಪಂ ಅಧ್ಯಕ್ಷೆ ಆಶಾ ಬೆನೆಡಿಕ್ಟ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಶಂಕರ್ ರಾವ್ ವಹಿಸಿ ಮಾತನಾಡಿ ಮನಸ್ಸು ಸ್ವಚ್ಚವಾಗಿದ್ದರೆ ಇಡೀ ಸಮಾಜದ ಶುಚಿತ್ವವನ್ನು ಕಾಪಾಡಬಹುದು. ಸ್ವಚ್ಚ ಭಾರತ್ ನ ಪರಿಕಲ್ಪನೆಯಲ್ಲಿ ನಾವು ಕಸದ ಬುಟ್ಟಿಗಳನ್ನು ವಿತರಿಸಿದ್ದೇವೆ ಎಂದರು.
ವೇದಿಕೆಯಲ್ಲಿ ಲಾಯಿಲ ಗ್ರಾಮ ಪಂಚಾಯತ್ ಲೆಕ್ಕ ಪರಿಶೋಧಕಿ ಸುಪ್ರಿತಾ ಶೆಟ್ಟಿ, ಘಟಕದ ಕಮ್ಯೂನಿಟಿ ಡೆವಲಪ್ಮೆಂಟ್ ಉಪಾಧ್ಯಕ್ಷೆ ಆಶಾಲತಾ ಪ್ರಶಾಂತ್ ಉಪಸ್ಥಿತರಿದ್ದರು.
ಘಟಕದ ಪೂರ್ವಧ್ಯಕ್ಷ ಸ್ವರೂಪ್ ಶೇಖರ್ ವೇದಿಕೆಗೆ ಅತಿಥಿಗಳನ್ನು ಬರಮಾಡಿಕೊಂಡರು, ಜೂನಿಯರ್ ಜೆಸಿ ಅಧ್ಯಕ್ಷ ರಾಮಕೃಷ್ಣ ಶರ್ಮಾ ಜೆಸಿ ವಾಣಿ ಉದ್ಘೋಷಿಸಿದರು. ಕಾರ್ಯದರ್ಶಿ ಸುಧೀರ್ ಕೆ ಎನ್ ವಂದಿಸಿದರು.
ಕಾರ್ಯಕ್ರಮದಲ್ಲಿ ಘಟಕದ ಪೂರ್ವಧ್ಯಕ್ಷರುಗಳಾದ ನಾರಾಯಣ ಶೆಟ್ಟಿ, ವಸಂತ್ ಶೆಟ್ಟಿ ಶ್ರದ್ದಾ,ಕಿರಣ್ ಕುಮಾರ್ ಶೆಟ್ಟಿ,ಸದಸ್ಯರುಗಳಾದ ಶೀತಲ್ ಜೈನ್, ಪ್ರಮೋದ್, ಶೈಲೇಶ್ ವಿನಾಯಕ್ ಪ್ರಸಾದ್ ಮತ್ತು ರಶ್ಮಿ ಭಾಗವಹಿಸಿದ್ದರು.