23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಂತಾ ಡಿ ಸೋಜ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ: ಜೆಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ಪ್ರಶಸ್ತಿಗಳ ಗರಿ

ಕೊಕ್ಕಡ: ಹಾಲಾಡಿಯಲ್ಲಿ ಜರುಗಿದ ವಲಯ ಮಟ್ಟದ ಸಮ್ಮೇಳನದಲ್ಲಿ ಕೊಕ್ಕಡ ಕಪಿಲಾ ಘಟಕದ ಹಿರಿಯ ಸದಸ್ಯರಾದ ಜೆಸಿಂತಾ ಡಿ ಸೋಜ ಅವರಿಗೆ ಪಂಚರತ್ನ ಪುರಸ್ಕಾರ ಅನ್ವಯ ಉದ್ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೆಸಿಐ ಶಂಕರನಾರಾಯಣ ಘಟಕದ ಆತಿಥ್ಯದಲ್ಲಿ ಜು. 23 ರಂದು ಶ್ರೀಮತಿ ಶಾಲಿನಿ ಜಿ. ಶಂಕರ ಕನ್ವೆನ್ಷನ್ ಸೆಂಟರ್, ಇದರಲ್ಲಿ ವಲಯ 15 ಇದರ ಅಭಿವೃದ್ಧಿ ಮತ್ತು ವ್ಯವಹಾರ ಸಮ್ಮೇಳನ ಜರುಗಿತು.ಕೊಕ್ಕಡ ಘಟಕ ಅಧ್ಯಕ್ಷ ಜಿತೇಶ್ ಎಲ್ ಪಿರೇರಾ ಅವರಿಗೆ ಈ ವರ್ಷ ಮಾಡಿದ ಸಾಧನೆಗೆ ಶೈನಿಂಗ್ ಪವರ್ ಸ್ಟಾರ್ ಅಧ್ಯಕ್ಷರು ಹಾಗೂ ಟಾಪ್ 8 ಘಟಕ ಎಂಬ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವಲಯಾಧ್ಯಕ್ಷ ಶ್ರೀ ಪುರುಷೋತ್ತಮ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ರಾಯನ್ ಉದಯ ಕ್ರಾಸ್ತಾ, ವ್ಯವಹಾರ ವಿಭಾಗದ ನಿರ್ದೇಶಕರಾದ ನಾಗರಾಜ್ ಪೂಜಾರಿ, ವಲಯ ಆಡಳಿತ ಮಂಡಳಿಯ ಮರಿಯಪ್ಪ, ಉಷಾ ಕಲ್ಮಾಡಿ, ವಲಯ ಉಪಾಧ್ಯಕ್ಷರು, ಕೊಕ್ಕಡ ಕಪಿಲಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನೂತನ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಜಯರಾಮ ಮಯ್ಯ ಅಧಿಕಾರ ಸ್ವೀಕಾರ

Suddi Udaya

ಗಮಕ ಸಮ್ಮೇಳನ ಡಾ. ಹೆಗ್ಗಡೆಯವರಿಂದ ಆಮಂತ್ರಣ ಬಿಡುಗಡೆ

Suddi Udaya

ಕಸ್ತೂರಿ ರಂಗನ್ ವರದಿ ವಿರೋಧಿಸಿ ನಡ ಗ್ರಾಮ ಪಂಚಾಯತ್ ನಲ್ಲಿ ಪ್ರತಿಭಟನೆ

Suddi Udaya

ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ವೈಭವ ಪೂರ್ಣವಾಗಿ ನಡೆದ ಕಾಲಾವಧಿ ನೇಮೋತ್ಸವ

Suddi Udaya

30ನೇ ವರ್ಷದ ಆಳ್ವಾಸ್ ವಿರಾಸತ್‌ಗೆ ಅದ್ಧೂರಿಯ ಚಾಲನೆ, ಮೇಳೈಸಿದ ವೈಭವ

Suddi Udaya

ತೆಕ್ಕಾರು: ಹೊಸಮೊಗ್ರು ಹೇಮಲತಾ ಕೊಂಡೆ ನಿಧನ

Suddi Udaya
error: Content is protected !!