September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಉಪಾಧ್ಯಕ್ಷ, ಯುವ ಉದ್ಯಮಿ ಶೀತಲ್ ಜೈನ್ ರವರಿಗೆ ಉದ್ಯಮ ರತ್ನ ಪ್ರಶಸ್ತಿ: ಜೆಸಿಐ ಬೆಳ್ತಂಗಡಿ ಘಟಕಾಧ್ಯಕ್ಷ ಶಂಕರ್ ರಾವ್ ರವರಿಗೆ ಶೈನಿಂಗ್ ಸೂಪರ್ ಸ್ಟಾರ್ ಪ್ರೆಸಿಡೆಂಟ್ ಪ್ರಶಸ್ತಿ

ಬೆಳ್ತಂಗಡಿ : ಜೆಸಿಐ ಶಂಕರನಾರಾಯಣ ಆತಿಥ್ಯ ದಲ್ಲಿ ನಡೆದ ವಲಯದ ಬಿಸಿನೆಸ್ ಕಾನ್ಫರೆನ್ಸ್ ನಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಉಪಾಧ್ಯಕ್ಷ ಬೆಳ್ತಂಗಡಿ ಪವರ್ ಆನ್ ಬ್ಯಾಟರಿ ಮಾಲಕ, ಯುವ ಉದ್ಯಮಿ ಶೀತಲ್ ಜೈನ್ ರವರಿಗೆ ಜೆಸಿಐ ವಲಯ 15 ನೀಡುವ ಪ್ರತಿಷ್ಠಿತ ಉದ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ, ಉಪನ್ಯಾಸಕ ಶಂಕರ್ ರಾವ್ ರವರಿಗೆ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಿಂದ ಘಟಕದ 74% ಬೆಳವಣಿಗಾಗಿ ಶೈನಿಂಗ್ ಸೂಪರ್ ಸ್ಟಾರ್ ಪ್ರೆಸಿಡೆಂಟ್ ಪ್ರಶಸ್ತಿ ಲಭಿಸಿದೆ.ಜೆಸಿಐ ವಲಯ 15ರ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಮತ್ತು ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ಅಧಿಕಾರಿ ಪ್ರಶಸ್ತಿ ನೀಡಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಕಾರ್ಯದರ್ಶಿ ಸುಧೀರ್ ಕೆ. ಎನ್, ಉಪಾಧ್ಯಕ್ಷ ಪ್ರೀತಮ್ ಶೆಟ್ಟಿ, ಕೋಶಾಧಿಕಾರಿ ಸುಧೀರ್ ಜೈನ್, ಸೋಶಿಯಲ್ ಮೀಡಿಯಾ ನಿರ್ದೇಶಕ ಅರಿಹಂತ್ ಜೈನ್, ಸದಸ್ಯರುಗಳಾದ ಶೈಲೇಶ್ ಮತ್ತು ವಿನಾಯಕ್ ಪ್ರಸಾದ್ ಪಾಲ್ಗೊಂಡಿದ್ದರು.

Related posts

ದಯಾ ವಿಶೇಷ ಶಾಲೆಯಲ್ಲಿ ಕೀರ್ತಿಶೇಷ ಕೆ. ವಸಂತ ಬಂಗೇರರ ಹುಟ್ಟುಹಬ್ಬ ಆಚರಣೆ

Suddi Udaya

ಗುಂಡೂರಿ: ಅವಾಚ್ಯ ಶಬ್ದಗಳಿಂದ ನಿಂದನೆ, ಹಲ್ಲೆ ಆರೋಪ: ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಮಾಸ್ತಿ ಸಂಸ್ಮರಣ ಕಾರ್ಯಕ್ರಮ

Suddi Udaya

ಬಿ.ಸಿ.ರೋಡ್ ಬಸ್‌ ನಿಲ್ದಾಣದಲ್ಲಿ ಯುವತಿಯ ಹತ್ಯೆ : ಆರೋಪಿ ಪರಾರಿ

Suddi Udaya

ಬೆಳ್ತಂಗಡಿ: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಕೆಂಪೇಗೌಡ ಜಯಂತಿ ಆಚರಣೆ

Suddi Udaya

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪುರಾಣ ವಾಚನ-ಪ್ರವಚನ: ಸಮಾರೋಪ ಸಮಾರಂಭ

Suddi Udaya
error: Content is protected !!