24.4 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ ವಲಯದ ಭಜನಾ ಮಂಡಳಿಗಳ ಪದಾಧಿಕಾರಿಗಳ ಸಭೆ

ಅಳದಂಗಡಿ : ಭಜನಾ ಪರಿಷತ್ ಬೆಳ್ತಂಗಡಿ ಇದರ ಅಳದಂಗಡಿ ವಲಯದ ಭಜನಾ ಮಂಡಳಿಗಳ ಪದಾಧಿಕಾರಿಗಳ ಸಭೆಯನ್ನು ಶ್ರೀ ಸೋಮನಾಥೇಶ್ವರಿ ಭಜನಾ ಮಂಡಳಿ ಅಳದಂಗಡಿಯಲ್ಲಿ ನಡೆಸಲಾಯಿತು.

ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಚಂದ್ರಶೇಖರ ಸಾಲಿಯನ್ ಕೊಯ್ಯೂರು ಭಾಗವಹಿಸಿ ಭಜನಾ ಮಂಡಳಿ ನೋಂದಾವಣಿ ಬಗ್ಗೆ ಹಾಗೂ ನವೀಕರಣ ಜಾಗದ ರೆಕಾರ್ಡ್ ಹಾಗೂ ಭದ್ರತೆಗಳ ಬಗ್ಗೆ ಭಜನಾ ಮಂಡಳಿಯ ಸಂಘಟನೆಯನ್ನು ಮಾಡುವ ಕುರಿತು ಮಂಡಳಿಯಲ್ಲಿ ಕೈಗೊಳ್ಳುವ ಕಾರ್ಯಕ್ರಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿ ಮಂಡಳಿಯಲ್ಲಿರುವ ಕುಂದು ಕೊರತೆಗಳ ಬಗ್ಗೆ ಭಜನಾ ಮಂಡಳಿ ಅಧ್ಯಕ್ಷ ಕಾರ್ಯದರ್ಶಿಯಲ್ಲಿ ವಿಮರ್ಶೆ ನಡೆಸಿ ಸೂಕ್ತ ಮಾಹಿತಿ ಮಾರ್ಗದರ್ಶನವನ್ನು ನೀಡುತ್ತಾ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಭಜನಾ ಮಂಡಳಿಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಕೈಜೋಡಿಸಿ ನಾವು ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಇತರರಿಗೆ ಮಾದರಿಯಾಗುವಂತೆ ಪ್ರಯತ್ನಿಸೋಣ ಎಂದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಪರಿಷತ್ತಿನ ವಲಯ ಸಂಯೋಜಕರಾದ ಸೋಮನಾಥ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರು ಭಜನಾ ಮಂಡಳಿಯ ಎಲ್ಲಾ ಅಧ್ಯಕ್ಷ ಕಾರ್ಯದರ್ಶಿಯವರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕರಾದ ಶ್ರೀಮತಿ ಸುಮಂಗಲ ರವರು ಸ್ವಾಗತಿಸಿ, ಸೇವಾ ಪ್ರತಿನಿಧಿ ಹೇಮಲತಾ ವಂದಿಸಿದರು.

Related posts

ಶಿರ್ಲಾಲು: ಬಸ್ಸ್ ಚಾಲಕ, ಯುವಕ ಶಶಿಧರ ದೇವಾಡಿಗ ನಿಧನ

Suddi Udaya

ಕೊಕ್ಕಡದಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರು ಕಳ್ಳತನ

Suddi Udaya

ಹಿರಿಯ ಸಹಕಾರಿ, ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷ ತಣ್ಣೀರುಪಂತ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಿರಂಜನ್ ಬಾವಂತಬೆಟ್ಟುರವರಿಗೆ ‘ಸಹಕಾರಿ ರತ್ನ ಪ್ರಶಸ್ತಿ’

Suddi Udaya

ಪಟ್ರಮೆ: ಶಾಂತಿಕಾಯ ಬಳಿ ಬರೆ ಕುಸಿತ: ರಸ್ತೆಗೆ ಉರುಳಿ ಬಿದ್ದ ಮರ

Suddi Udaya

ಪಡಂಗಡಿ ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮ ಸಭೆ ಮತ್ತು ಸಿರಿ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಬಳಂಜ: ಎಲ್ಯೊಟ್ಟು ನಿವಾಸಿ ಸೋಮನಾಥ ಪೂಜಾರಿ ನಿಧನ

Suddi Udaya
error: Content is protected !!