April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪೆರಾಲ್ದರಕಟ್ಟೆ ಸ್ವಲಾತ್ ಕಮಿಟಿ ನೂತನ ಆಡಳಿತ ಸಮಿತಿ ರಚನೆ

ಬದ್ರೀಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಇದರ ಅಂಗ ಸಂಸ್ಥೆಯಾದ ಸ್ವಲಾತ್ ಕಮಿಟಿ ಪೆರಾಲ್ದರಕಟ್ಟೆ ಇದರ ವಾರ್ಷಿಕ ಮಹಾಸಭೆಯು ಜು. 21ರಂದು ಶಾದಿಮಹಲ್‌ ಸಭಾಂಗಣ ಪೆರಾಲ್ದರಕಟ್ಟೆಯಲ್ಲಿ ಬದ್ರಿಯಾ ಆಡಳಿತ ಸಮಿತಿ ಪೆರಾಲ್ದರಕಟ್ಟೆ ಇದರ ಅಧ್ಯಕ್ಷರಾದ ನವಾಜ್ ಶರೀಫ್ ಕಟ್ಟೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಳೆದ ಆಡಳಿತಾವಧಿಯ ಅಭಿವೃದ್ಧಿ ಕಾರ್ಯಗಳನ್ನು ಸ್ವಲಾತ್ ಕಮಿಟಿ ಅಧ್ಯಕ್ಷರಾದ ದಾವೂದ್ ಸಾಹೇಬ್ ಮಂಜೋಟ್ಟಿ ಇವರು ವಿವರಿಸಿದರು ಹಾಗೂ 2022-23ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಪ್ರದಾನ ಕಾರ್ಯದರ್ಶಿ ಪಿ.ಕೆ ಆದಂ ಮಂಜೋಟ್ಟಿ ಮಂಡಿಸಿದರು.

ಸಭೆಯಲ್ಲಿ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಸಿದ್ದಿಕ್ ಮಸೀದಿಬಳಿ ಆಯ್ಕೆಯಾದರು, ಗೌರವ ಅಧ್ಯಕ್ಷ‌ರಾಗಿ ಅಬ್ದುಲ್ ಕರೀಂ ಕಾರಂದೂರು, ಪ್ರಧಾನ ಕಾರ್ಯದರ್ಶಿ ‌ಯಾಗಿ ಹಮೀದ್ ಬಾವಿಬಳಿ, ಕೋಶಾಧಿಕಾರಿಯಾಗಿ ದಾವೂದ್ ಸಾಹೇಬ್ ಮಂಜೋಟ್ಟಿ, ಉಪಾಧ್ಯಕ್ಷರಾಗಿ ಹಸನ್ ಗಿಂಡಾಡಿ ಮತ್ತು ಸಿರಾಜ್ ಮಂಜೋಟ್ಟಿ , ಕಾರ್ಯದರ್ಶಿಯಾಗಿ ಪಿ.ಕೆ.ಶಮದ್ ಕಟ್ಟೆ ಆಯ್ಕೆಯಾದರು.

ಪ್ರಸ್ತುತ ಸಾಲಿನ ಆಡಳಿತ ಸಮಿತಿಯ ಸದಸ್ಯರಾಗಿ ಪಿ.ಕೆ ಆದಂ ಮಂಜೋಟ್ಟಿ , ಶಮೀಮ್ ಮದ್ದಡ್ಕ, ಸುಲೈಮಾನ್ ಕಟ್ಟೆ, ಬಶೀರ್ ಮಸೀದಿಬಳಿ, ಇಬ್ರಾಹಿಂ ತಮುನಾಕ ಮಂಜೋಟ್ಟಿ, ನವಾಜ್ ಶರೀಫ್ ಕಟ್ಟೆ, ಸಾದಿಕ್ ಮಸೀದಿ ಬಳಿ, ಬಶೀರ್ ವೇಣೂರು, ಕಮರುದ್ದೀನ್ ಮಸೀದಿ ಬಳಿ ಮತ್ತು ಪಿ.ಕೆ ಶರೀಫ್ ಮಂಜೋಟ್ಟಿ ಆಯ್ಕೆಯಾದರು.

Related posts

ಗುರುವಾಯನಕೆರೆ: ನಿಸರ್ಗ ಕರ್ಟನ್ & ವಾಲ್ ಪೇಪರ್ ಮಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ಸ್ಪೆಷಲ್ ಡಿಸ್ಕೌಂಟ್ ಸೇಲ್

Suddi Udaya

ಮಡಂತ್ಯಾರು ಪುಂಜಾಲಕಟ್ಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಳೀಯ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹದಗೆಟ್ಟಿರುವ ರಸ್ತೆಯ ಶ್ರಮದಾನ

Suddi Udaya

ಬೆಳ್ತಂಗಡಿ ಕುಂಬಾರ ಸೇವಾ ಸಂಘ ವತಿಯಿಂದ ಆಯೋಜಿಸಿದ ಮಹಮ್ಮಾಯಿ ಟ್ರೋಫಿ -2025 ಕಾರ್ಯಕ್ರಮದಲ್ಲಿ ಚಂದ್ರಹಾಸ ಕುಂಬಾರ ಬಂದಾರು ಇವರಿಗೆ ಸಾಹಿತ್ಯ ರತ್ನ ಪ್ರಶಸ್ತಿ ಗೌರವ

Suddi Udaya

ಕಳಿಯ : ಎರುಕಡಪ್ಪು ಅಂಗನವಾಡಿ ಕೇಂದ್ರದಲ್ಲಿ ಮಾವಿನಕಾಯಿಯನ್ನು ಹೋಲುವ ಕೋಳಿ ಮೊಟ್ಟೆ

Suddi Udaya

ಅಳದಂಗಡಿ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಹಾಗೂ ಬೀಜ ಬಿತ್ತನೆ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜು ಎದುರು ಸ್ಕೂಟಿ ಮತ್ತು ಗೂಡ್ಸ್ ಲಾರಿ ಡಿಕ್ಕಿ

Suddi Udaya
error: Content is protected !!