25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಯುವ ಉದ್ಯಮಿ ಕಿರಣ್ ಕುಮಾರ್ ಮಂಜಿಲರವರಿಂದ ಮಾನವೀಯ ಕಾರ್ಯ: ಆರಂಬೋಡಿ ಗ್ರಾಮದ ಬಡ ಕುಟುಂಬಕ್ಕೆ ಸುಮಾರು ರೂ 70 ಸಾವಿರದಲ್ಲಿ ಶೌಚಾಲಯ ನಿರ್ಮಿಸಿ ಹಸ್ತಾಂತರ

ಬೆಳ್ತಂಗಡಿ: ತಾಲೂಕಿನ ಆರಂಬೋಡಿ ಗ್ರಾಮದ ಗಾಂದೊಟ್ಯ ನಿವಾಸಿಯಾದ ಸುಜಾತಾ ಪೂಜಾರಿ ಅವರಿಗೆ ರೋಟರಿ ಕ್ಲಬ್ ಲೋರೆಟ್ಟೋ ಹೀಲ್ಸ್ ನ ಸಕ್ರಿಯ ಸದಸ್ಯ ಕಿರಣ್ ಕುಮಾರ್ ಮಂಜಿಲ ಇವರು ಶೌಚಾಲಯ ಹಾಗೂ ಸ್ನಾನದ ಕೊಠಡಿ ನಿರ್ಮಿಸಿ ಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಿರಣ್ ಮಂಜಿಲರವರು ಸುಮಾರು ರೂ 70ಸಾವಿರ ಖರ್ಚು ಮಾಡಿ ನಿರ್ಮಿಸಿದ ಶೌಚಾಲಯ ಹಾಗೂ ಸ್ಥಾನದ ಕೊಠಡಿಯನ್ನು ಭಾರತೀಯ ಜನತಾ ಪಾರ್ಟಿಯ ಬೆಳ್ತಂಗಡಿ ಅಧ್ಯಕ್ಷ ಜಯಂತ್ ಕೋಟ್ಯಾನ್ ಅವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಕಿರಣ್ ಮಂಜಿಲರವರು ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದು, ಸಮಾಜ ಸೇವೆಯಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡಿರುತ್ತಾರೆ. ಇವರ ಹುಟ್ಟುವಹಬ್ಬದ ದಿನದಂದು ಶೌಚಾಲಯವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಲೋರೆಟ್ಟೋ ಹೀಲ್ಸ್ ನ ಅಧ್ಯಕ್ಷರಾದ ರಾಮಚಂದ್ರ ಶೆಟ್ಟಿಗಾರ್, ಕಾರ್ಯದರ್ಶಿಯಾದ ಐವನ್ ಮೇನೆಜಸ್, ಸಹಾಯಕ ಗವರ್ನರ್ ರಾಘವೇಂದ್ರ ಭಟ್, ಪದಾಧಿಕಾರಿಗಳಾದ ಹರಿಪ್ರಸಾದ್ ಶೆಟ್ಟಿ, ಶರಾಲ್ಡ್ ಕ್ರಾಸ್ತಾ., ರೋಡಲ್ಫ್ ಮಾಸ್ಟರ್,ವೇಣೂರು ಗ್ರಾ. ಪಂ. ಮಾಜಿ ಸದಸ್ಯರಾದ ರಾಜೇಶ್ ಮೂಡುಕೋಡಿ, ಆರಂಬೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಂದ್ರ ಶೆಟ್ಟಿ ಅಜ್ಜಾಡಿ, ಭಾರತೀಯ ಜನತಾ ಪಕ್ಷದ ಬೂತ್ ಸಮಿತಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಉಮನೊಟ್ಟು ಹಾಗೂ ಪದಾಧಿಕಾರಿಗಳಾದ ಗಣೇಶ್ ಶೆಟ್ಟಿಗಾರ್, ರಾಧಾಕೃಷ್ಣ ಶೆಟ್ಟಿ ಉಗ್ರೋಡಿ, ಆಶಾ ಎಸ್ ಶೆಟ್ಟಿ, ಉಮೇಶ್ ಶೆಟ್ಟಿ ಪಾಳ್ಯ, ಸಂತೋಷ್ ಮಂಜಿಲ, ರಾಜೇಶ್ ಹುಲಿಮೇರು, ಸುರೇಶ್ ಮಂಜಿಲ, ನಿತೇಶ್ ಕುಂಜಾಡಿ, ಸುರೇಶ್. ಎಚ್.ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಪ.ಪಂ. ನಾಲ್ಕನೇ ವಾರ್ಡಿನ ಹಿಂದೂ ರುದ್ರ ಭೂಮಿಗೆ ರೂ 40 ಲಕ್ಷ ವೆಚ್ಚದಲ್ಲಿ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ರಥೋತ್ಸವ

Suddi Udaya

ರೋಟರಿ ಕ್ಲಬ್ ಬೆಳ್ತಂಗಡಿ ಇವರ ವತಿಯಿಂದ ವಿದ್ಯಾಸಿರಿ ಕಾರ್ಯಕ್ರಮ ಉದ್ಘಾಟನೆ

Suddi Udaya

ಧರ್ಮಸ್ಥಳ ಪೊಲೀಸ್ ಠಾಣೆಯ ನೂತನ ಕಟ್ಟಡದ ಉದ್ಘಾಟನೆ

Suddi Udaya

ಮಾಲಾಡಿ: ವಿದ್ಯುತ್ ಶಾರ್ಟ್ ನಿಂದ ಮನೆಯಲ್ಲಿ ಬೆಂಕಿ: ಸೋತ್ತುಗಳು ಬೆಂಕಿಗಾಹುತಿ

Suddi Udaya

ಕಳೆಂಜ ಸಂಘಪರಿವಾರದ ಕಾರ್ಯಕರ್ತರಿಂದ ಮನೆ ನಿರ್ಮಾಣ

Suddi Udaya
error: Content is protected !!