July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬ್ಯಾಂಕ್ ಆಫ್ ಬರೋಡದ 116ನೇ ಸಂಸ್ಥಾಪನ ದಿನದ ಪ್ರಯುಕ್ತ ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಗೆ ಶಾಲಾ ಸೂಚನಾ ಫಲಕ ಹಾಗೂ ವೈರ್ಲೆಸ್ ಸೌಂಡ್ ಬಾಕ್ಸ್ ಕೊಡುಗೆ

ಬ್ಯಾಂಕ್ ಆಫ್ ಬರೋಡದ 116ನೇ ಸಂಸ್ಥಾಪನ ದಿನದ ಅಂಗವಾಗಿ, ಬ್ಯಾಂಕ್ ಆಫ್ ಬರೋಡ ಧರ್ಮಸ್ಥಳದ ವತಿಯಿಂದ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಶಾಲೆಗೆ ಉಚಿತವಾಗಿ ಒಂದು ಶಾಲಾ ಸೂಚನಾ ಫಲಕ ಹಾಗೂ ವೈರ್ಲೆಸ್ ಸೌಂಡ್ ಬಾಕ್ಸ್ ನ್ನು ಕೊಡುಗೆಯಾಗಿ ನೀಡಿ ಸಹಕರಿಸಿದರು.

ಬ್ಯಾಂಕ್ ಆಫ್ ಬರೋಡ ಧರ್ಮಸ್ಥಳದ ಮ್ಯಾನೇಜರ್ ಅಮರೇಶ್ ಮಾತನಾಡಿ ಮಕ್ಕಳು ಅಂದರೆ ದೇವರಿಗೆ ಸಮಾನರಾದವರು, ಮುಗ್ದ ಮನಸಿನ ಈ ಮಕ್ಕಳು ನಿರ್ಮಲ ಮನಸ್ಸಿನಿಂದ ಕೂಡಿರುತ್ತಾರೆ, ಪ್ರಾಥಮಿಕ ಶಾಲೆಗಳು ಎಂದರೆ ತುಂಬಾ ಪ್ರೀತಿ, ಎಸ್. ಡಿ. ಎಂ ಶಿಕ್ಷಣ ಸಂಸ್ಥೆಯ ಮೇಲೆ ಅಪಾರವಾದ ಗೌರವವಿದೆ. ಹೀಗಾಗಿ ನಾವು ಈ ಶಾಲೆಗೆ ನೋಟೀಸ್ ಬೋರ್ಡ್ ಮತ್ತು ಸೌಂಡ್ ಬಾಕ್ಸ್ ನೀಡಿದ್ದೇವೆ ಎಂದು ಅಭಿಮಾನದ ಮಾತುಗಳನ್ನು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ಶೀನಪ್ಪ ಗೌಡ ರವರು ಮಕ್ಕಳೆಲ್ಲರೂ ಕೂಡ ಇವತ್ತು ನೀಡಿದ ಕೊಡುಗೆಯನ್ನು ಶಿಕ್ಷಣದ ಉದ್ದೇಶಕ್ಕಾಗಿ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿ, ಬ್ಯಾಂಕ್ ಆಫ್ ಬರೋಡ ಧರ್ಮಸ್ಥಳದ ಮ್ಯಾನೇಜರ್ ಮತ್ತು ಎಲ್ಲಾ ಸಿಬ್ಬಂದಿಗಳನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಅಶ್ವಿತ್ ಶೆಟ್ಟಿ, ಧನಂಜಯ್, ಹರ್ಷಿತ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪವನ್ ಕುಮಾರ್ ಸ್ವಾಗತಿಸಿದರು, ಶ್ರೀಮತಿ ಸುಜಾತಾ ಬಿ ರವರು ಧನ್ಯವಾದಗೈದ ಕಾರ್ಯಕ್ರಮ ವನ್ನು ಶ್ರೀ ನಿಶಾಂತ್ ಕುಮಾರ್ ನಿರೂಪಿಸಿದರು.

ಶಾಲೆಯ ಎಲ್ಲಾ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

Related posts

ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆ ದುರಸ್ತಿ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಆಗಬೇಕಾಗಿರುವ ಬದಲಾವಣೆ ಬಗ್ಗೆ ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಕೆ

Suddi Udaya

ಚಿನ್ನವನ್ನು ತೊಳೆದುಕೊಡುವುದಾಗಿ ಹೇಳಿದಾತ ಸರದೊಂದಿಗೆ ಪರಾರಿ

Suddi Udaya

ಲಾಯಿಲ ಬೀಕರ ಗಾಳಿ ಮಳೆಗೆ ಪುತ್ರಬೈಲಿನಲ್ಲಿ ಮನೆಗೆ ತೆಂಗಿನ ಮರ ಬಿದ್ದು ಹಾನಿ

Suddi Udaya

ಸುನ್ನೀ ವಿದ್ಯಾಬ್ಯಾಸ ಬೋರ್ಡ್ ಫಲಿತಾಂಶ: ಕೊಯ್ಯೂರು ಉಣ್ಣಾಲು ಮದರಸದ ಮುಹಮ್ಮದ್ ರಾಝಿ, ಫಾತಿಮತ್ ನುಝೈರಾ ರೇಂಜ್ ಗೆ ಪ್ರಥಮ

Suddi Udaya

ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿ ವಿವೇಕ್ ಎನ್ ಡಿ ಎ ಕ್ಲಿಯರ್

Suddi Udaya

ಮಗನಿಂದ ತಂದೆಯ ಕೊಲೆ ಯತ್ನ ಆರೋಪಿ ಮಗನನ್ನು ಬಂಧಿಸಿದ ಪೊಲೀಸರು

Suddi Udaya
error: Content is protected !!