ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪಂಚಾಯಿತಿಯ ಮಾಸಿಕ ಕೆ.ಡಿ.ಪಿ.ಸಭೆಯು ಜು.27ರಂದು
ತಾ.ಪಂ.ನ ಆಡಳಿತಾಧಿಕಾರಿ ಹಾಗೂ ಜಿ.ಪಂ. ಉಪ ಕಾರ್ಯದರ್ಶಿಯವರಾದ ಆನಂದ ಕುಮಾರ್ ರವರ ಅಧ್ಯಕ್ಷತೆಯಲ್ಲಿ ತಾ.ಪಂ ಸಭಾಂಗಣದಲ್ಲಿ
ಜರುಗಿತು.
ಕಾರ್ಯನಿರ್ವಾಹಕ ಅಧಿಕಾರಿ
ಕುಸುಮಾಧರ್ ಹಾಗೂ ಮೆಸ್ಕಾಂ,ಸಮಾಜ ಕಲ್ಯಾಣ, ಅಕ್ಷರ ದಾಸೋಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪಶುಸಂಗೋಪನೆ, ಬಿ.ಸಿ.ಎಂ,ಸಹಕಾರ, ಕೃಷಿ,ಅರಣ್ಯ,ಪಂ.ರಾ.ಇ. ಉಪವಿಭಾಗ,ಆರೋಗ್ಯ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು , ತಾ.ಪಂ ವ್ಯವಸ್ಥಾಪಕ ಪ್ರಶಾಂತ್ ಡಿ.ಬಳೆಂಜ, ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ ಉಪಸ್ಥಿತರಿದ್ದರು.
