ಶ್ರೀ ಧಮ೯ಸ್ಥಳ ಭಜನಾ ಪರಿಷತ್ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿದ್ದ, ಜಯರಾಮ ನೆಲ್ಲಿತ್ತಾಯರಿಗೆ “ಸಮಾಜ ಭೂಷಣ”ಪ್ರಶಸ್ತಿ

Suddi Udaya

ಬೆಳ್ತಂಗಡಿ: ಹತ್ತೊಂಬತ್ತು ವರ್ಷಗಳ ಕಾಲ ಶ್ರೀ ಧಮ೯ಸ್ಥಳ ಭಜನಾ ಪರಿಷತ್ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿದ್ದ,
ಇಡೀ ರಾಜ್ಯದಲ್ಲಿ ಮಹತ್ವದ ಭಕ್ತಿ ಸಂಸ್ಕೃತಿಯ ಸಂಚಲನ ಮೂಡಿಸಿದ್ದ,‌ ಬಿ. .ಜಯರಾಮ ನೆಲ್ಲಿತ್ತಾಯರಿಗೆ ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಶನ್
“ಧಾರ್ಮಿಕ ಸಮಾಜ ಭೂಷಣ”ಪ್ರಶಸ್ತಿಯಿಂದ ನೀಡಿ ಗೌರವಿಸಿದೆ.
‌ಬೆಳ್ತಂಗಡಿಯ ಶಿಶಿಲ ಗ್ರಾಮದಲ್ಲಿ ಜನಿಸಿ, ಧರ್ಮಸ್ಥಳದ ಧಾರ್ಮಿಕ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಪಲ್ಲವಿಸಿ, ಮೈಸೂರು ವಿಭಾಗದ ಸಾಮಾಜಿಕ ಸೇವೆಯ ಮಹಾಸಾಧಕರೆನಿಸಿರುವ ಬಿ.ಜಯರಾಮ ನೆಲ್ಲಿತ್ತಾಯರು, ನಿರಂತರವಾಗಿ ನಲವತ್ತು ವರ್ಷಗಳ ಕಾಲ ನಿಸ್ವಾರ್ಥ ಜನಸೇವೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
ಭಜನಾ ಸಂಘಟನೆಗಳ ಸರದಾರರೆನಿಸಿಕೊಂಡು, ಸತತವಾಗಿ ತನ್ನ ಸೇವಾವಧಿಯಲ್ಲಿ ಹತ್ತೊಂಬತ್ತು ವರ್ಷಗಳ ಕಾಲ ಇಡೀ ರಾಜ್ಯದಲ್ಲಿ ಮಹತ್ವದ ಭಕ್ತಿ ಸಂಸ್ಕೃತಿಯ ಸಂಚಲನ ಮೂಡಿಸಿದ್ದಾರೆ.
ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ದೇವಾಲಯ ಜೀರ್ಣೋದ್ಧಾರ, ಬ್ರಹ್ಮಕಲಶದಂತಹ ನೂರಾರು, ಮಹತ್ವದ ಕಾರ್ಯಕ್ರಮಗಳ ರೂವಾರಿಯಾಗಿ, ಹಿರಿತನದ ಗಾಂಭೀರ್ಯ, ಮೌಲಿಕ ವಿಚಾರಧಾರೆ, ಹೃದಯವಂತಿಕೆ, ಸಮಾಜಮುಖಿ ಚಿಂತನೆಗಳಿಂದ ಲಕ್ಷ ಲಕ್ಷ ಜನರ ಆತ್ಮೀಯ ದಾರಿದೀವಿಗೆಯಾಗಿರುವ ಅವರನ್ನು. ಗುರುತಿಸಿ, ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಶನ್ ಬಿ.ಜಯರಾಮ ನೆಲ್ಲಿತ್ತಾಯರಿಗೆ “‘ಧಾರ್ಮಿಕ ಸಮಾಜ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

Leave a Comment

error: Content is protected !!