24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿ

ಮುಂಡಾಜೆ ರಾಷ್ಟ್ರೀಯ ಹೆದ್ದಾರಿಗೆ ಬಿದ್ದ ಮರ ತೆರವು


ಮುಂಡಾಜೆ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಪರಶುರಾಮ ದೇವಸ್ಥಾನದ ಮುಂಭಾಗದಲ್ಲಿ ರಸ್ತೆಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು ಸಂಚಾರ ವ್ಯತ್ಯಯ ಉಂಟಾದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಮುಂಜಾನೆ 4.30ರ ಸುಮಾರಿಗೆ ಮರ ಉರುಳಿ ಬಿದ್ದು 6ಗಂಟೆ ತನಕ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.
ಮರ ಬಿದ್ದ ರಸ್ತೆ ಬದಿಯಲ್ಲಿ ಪರಶುರಾಮ ದೇವಸ್ಥಾನದ ವಾಹನ ಪಾರ್ಕಿಂಗ್ ಸ್ಥಳ ಇದ್ದು ಸ್ಥಳೀಯರು ಅದರ ಮೂಲಕ ಲಘು ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.ಬೆಳಿಗ್ಗೆ 8ಗಂಟೆ ಹೊತ್ತಿಗೆ ಮರ ತೆರವು ಕಾರ್ಯ ಪೂರ್ಣಗೊಂಡಿತು.
ಮರವನ್ನು ತೆರೆವುಗೊಳಿಸಲು ಮುಂಡಾಜೆ ಗ್ರಾಪಂ ಸದಸ್ಯ ಹಾಗೂ ಶೌರ್ಯ ವಿಪತ್ತು ತಂಡದ ಸದಸ್ಯ ಜಗದೀಶ್ ನಾಯ್ಕ್, ಗಣೇಶ ಬಂಗೇರ, ಸಚಿನ್ ಭಿಡೆ ಸ್ಥಳೀಯರಾದ ಶೇಖರ್, ಭರತ್, ಅಬೂಬಕ್ಕರ್, ರಶೀದ್, ಕೇಶವಗೊಲ್ಲ,ಅಶೋಕ್ ಮೆಹೆoದಳೆ,ಅಣ್ಣಯ್ಯ,ರಾಘವ, ಸಂಗಮ್ ಲತೀಫ್ , ಅರಣ್ಯ ಇಲಾಖೆಯ ಸಿಬ್ಬಂದಿಸಂತೋಷ್,ಸದಾನಂದ,ಮತ್ತಿತರರು ಸಹಕರಿಸಿದರು.

Related posts

ಬೆಳ್ತಂಗಡಿ ಶಾಸಕರ ಕಚೇರಿ “ಶ್ರಮಿಕ” ಕಾರ್ಯಾಲಯ ಉದ್ಘಾಟನೆ: ಶಾಸಕ ಹರೀಶ್ ಪೂಂಜರವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಗೌರವಾರ್ಪಣೆ

Suddi Udaya

ಕೂಟ ಮಹಾಜಗತ್ತು ಬೆಳ್ತಂಗಡಿ ವತಿಯಿಂದ ಮಕರ ಸಂಕ್ರಾಂತಿ ಆಚರಣೆ ಮತ್ತು ಅಭಿನಂದನಾ ಕಾರ್ಯಕ್ರಮ

Suddi Udaya

ಜೆಸಿಸಿ ಬೆಳ್ತಂಗಡಿ ಮಂಜುಶ್ರೀಯಿಂದ ವಲಯದ ಸ್ವಾಗತ್ ಕಾರ್ಯಕ್ರಮ ಅಯೋಜನೆ

Suddi Udaya

ಸೌಜನ್ಯ ಕೊಲೆ ಪ್ರಕರಣ: ಕೊಕ್ಕಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

Suddi Udaya

ಪೆರಾಲ್ದರಕಟ್ಟೆ ಸ್ವಲಾತ್ ಕಮಿಟಿ ನೂತನ ಆಡಳಿತ ಸಮಿತಿ ರಚನೆ

Suddi Udaya

ಉಜಿರೆ : ಕುಸಿದು ಬಿದ್ದು ಅಪರಿಚಿತ ವ್ಯಕ್ತಿ ಸಾವು

Suddi Udaya
error: Content is protected !!