ನಡ: ನಡ ಆಯುಷ್ಮಾನ್ ಆರೋಗ್ಯ ಸೇವಾ ಕೇಂದ್ರದ ಸೇವಕಿ ಲೀನಾ ಹಾಗೂ ಆರೋಗ್ಯ ಸಹಾಯಕಿ ಸಾವಿತ್ರಿ ಇವರು ತಮ್ಮ ಸೇವಾ ಕೇಂದ್ರಕ್ಕೆ, ಆಗಮಿಸುವ ಜನರಿಗೆ ಕುಳಿತು ಕೊಳ್ಳಲು ಆಸನದ (ಕುರ್ಚಿ ) ಬೇಡಿಕೆಯನ್ನು ನಡ ಗ್ರಾಮ ಪಂಚಾಯತ್ ಗೆ ನೀಡಿದಾಗ, ಪಂಚಾಯತ್ ವತಿಯಿಂದ, ಸ್ನೇಹ ಸೇವಾ ಟ್ರಸ್ಟ್ ಉಜಿರೆ ಸುರೇಶ್ ಹೆಬ್ಬಾರ್ ಹಾಗೂ ಗಜಾನನ ಗೋಗಟೆ, ಇವರಲ್ಲಿ ಸಹಾಯಹಸ್ತ ಕೇಳಿದಾಗ ಕೂಡಲೇ ಸ್ಪಂದಿಸಿದ ಅವರು ಕುರ್ಚಿಯನ್ನು ದೇಣಿಗೆ ನೀಡಿರುತ್ತಾರೆ.
ಈ ಮೊದಲು ನಮ್ಮ ನಡ ಕನ್ಯಾಡಿ ಗ್ರಾಮದ 8 ಅಂಗನವಾಡಿ ಶಾಲೆಗಳಿಗೆ ಫಿಲ್ಟರ್ ನೀಡಿರುತ್ತಾರೆ. ಅದಲ್ಲದೆ ನಡ ಕನ್ಯಾಡಿ ಗ್ರಾಮಗಳ 5 ಸರಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಿಗೆ ಪುಸ್ತಕ ವಿತರಣೆ ಒದಗಿಸಿರುತ್ತಾರೆ.
ಈ ಸಂದರ್ಭದಲ್ಲಿ ನಡ ಗ್ರಾ.ಪಂ. ಅಧ್ಯಕ್ಷ ವಿಜಯ ಗೌಡ, ಉಜಿರೆ ಸ್ನೇಹ ಸೇವಾ ಟ್ರಸ್ಟ್ ನ ಸುರೇಶ್ ಹೆಬ್ಬಾರ್ ಹಾಗೂ ಗಜಾನನ ಗೋಗಟೆ, ಆಯುಷ್ಮಾನ್ ಆರೋಗ್ಯ ಸೇವಾ ಕೇಂದ್ರದ ಲೀನಾ, ಸಾವಿತ್ರಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.