23.6 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಶ್ರೀ ಧ. ಮಂ. ವಸತಿ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಯಾಂತ್ರಿಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ ಸಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಆಯೋಜಿಸಲ್ಪಟ್ಟ ಯಾಂತ್ರಿಕೃತ ಭತ್ತ ನಾಟಿಯ ಪ್ರಾತ್ಯಕ್ಷಿಕೆಯನ್ನು ಶ್ರೀಮತಿ ಸೋನಿಯಾ ವರ್ಮಾ ನಿನಾದ ಚಿಲುಮೆ ಇವರು ನಾಟಿ ಯಂತ್ರಕ್ಕೆ ಸಸಿಮಡಿಯನ್ನು ನೀಡುವ ಮೂಲಕ ಚಾಲನೆಯನ್ನು ನೀಡಿದರು.


ನೀನಾದ ಚಿಲುಮೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜು ಉಜಿರೆಯ ವಿದ್ಯಾರ್ಥಿಗಳಿಗೆ ಯಾಂತ್ರಿಕೃತ ಭತ್ತ ನಾಟಿಯ ಬಗ್ಗೆ ಪ್ರಾತೇಕ್ಷಿಕಯ ಮೂಲಕ ಮಾಹಿತಿಯನ್ನು ನೀಡಲಾಯಿತು

ವಿದ್ಯಾರ್ಥಿಗಳಿಗೆ ಭತ್ತವನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ ಎನ್ನುವ ಸಂದೇಶದೊಂದಿಗೆ, ಊಟದ ಅನ್ನದ ಒಂದು ಅನ್ನದ ಅಗಳಿನ ಮಹತ್ವತೆಯನ್ನು ನಾವು ಅರ್ಥ ಮಾಡಿಕೊಂಡು ಅನ್ನದ ಅಗಳನ್ನು ಬಿಸಾಡಬಾರದು, ಮಳೆ ಗಾಳಿ ಬಿಸಿಲಿನಲ್ಲಿ ಭತ್ತದ ಸಸಿಯು ಹಂತ ಹಂತದಲ್ಲಿಯೂ ಕೂಡ ಬೆಳೆದು ನಮಗೆ ಅನ್ನವನ್ನು ನೀಡುತ್ತದೆ. ಹಿಂದಿನ ಕಾಲದ ಸಾಂಪ್ರದಾಯಿಕ ಪದ್ಧತಿಯಲ್ಲಿ ಭತ್ತ ಕೃಷಿಯನ್ನು ಮಾಡಿದಾಗ ಸಮಯವು ಹೆಚ್ಚು ವ್ಯರ್ಥವಾಗಿ ಕೂಲಿಯಾಳುಗಳ ಹೆಚ್ಚಿನ ಬಳಕೆಯನ್ನು ಮಾಡಿ ಖರ್ಚು ಕೂಡ ಹೆಚ್ಚಾಗುತ್ತಿತ್ತು, ಇಂದು ಕೂಲಿಯಾಳುಗಳ ಸಮಸ್ಯೆಯನ್ನು ನಿವಾರಿಸಿ ಕಡಿಮೆ ಖರ್ಚಿನಲ್ಲಿ ಯಾಂತ್ರಿಕೃತ ಭತ್ತ ಬೇಸಾಯವನ್ನು ಮಾಡಬಹುದಾಗಿದೆ ಎನ್ನುವ ಮಾತಿನೊಂದಿಗೆ ಮಕ್ಕಳಿಗೆ ನಾವು ಯಾವುದೇ ಶಿಕ್ಷಣ ಅಥವಾ ಪದವಿ ಉದ್ಯೋಗವನ್ನು ಮಾಡಿದರು ಕೂಡ ಭತ್ತ ಕೃಷಿಯನ್ನು ಉಳಿಸಬೇಕಾಗಿದೆ ಈ ನಿಟ್ಟಿನಲ್ಲಿ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್,
ಯುವರಾಜ್ ಪೂವಣಿ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಸುರೇಂದ್ರ ಕುಮಾರ್, ಯೋಜನಾಧಿಕಾರಿಗಳು ಬೆಳ್ತಂಗಡಿ ತಾಲೂಕು. ಸುನಿಲ್ ಪಂಡಿತ್ ಪ್ರಾಂಶುಪಾಲರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜು ಉಜಿರೆ, ತೃಪ್ತ ಜೈನ್ ಎಸ್ ಡಿ ಎಂ ಉಜಿರೆ, ಯತೀಶ್ ಕೆ ಬಳೆಂಜ ಪಾಲಕರು ರತ್ನಮಾನಸ,
ರಾಮ್ ಕುಮಾರ್ ಕೃಷಿ ಮೇಲ್ವಿಚಾರಕರು ಬೆಳ್ತಂಗಡಿ ಮತ್ತು ಸಿ ಎಚ್ ಎಸ್ ಸಿ ಪ್ರಬಂಧಕರಾದ ಸಚಿನ್,
ಇಕೋ ಕ್ಲಬ್ ನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಅಂಡಿಂಜೆ ಕಾರ್ಯಕ್ಷೇತ್ರದ ಜ್ಞಾನವಿಕಾಸ ಕೇಂದ್ರದ ಸಭೆ: ಸಿರಿ ಧಾನ್ಯಗಳ ಬಳಕೆ ಹಾಗೂ ಆಷಾಢದಲ್ಲಿ ಒಂದು ದಿನ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕ ಸ್ಥಾನದ ಉಪಚುನಾವಣೆಗೆ ಮಾಜಿ ಸೈನಿಕ ತಂಗಚ್ಚನ್ ಅವಿರೋಧ ಆಯ್ಕೆ

Suddi Udaya

ಎ.30 ಉಜಿರೆಯಲ್ಲಿ‌ ಬೃಹತ್ ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ನಿಡ್ಲೆ : ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ

Suddi Udaya

ಒಡಿಶಾದ ರೈಲು ದುರಂತದಲ್ಲಿ ಪಾರಾದ ವೇಣೂರಿನ ಪ್ರಯಾಣಿಕರು

Suddi Udaya
error: Content is protected !!