ಅಳದಂಗಡಿ: ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಸಭಾ ಭವನದಲ್ಲಿ ಜು.31ರಂದು ನಡೆಯಿತು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗಣೇಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರುವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಕೃಷ್ಣರಾಜ ಭಟ್, ದ.ಕ.ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಸುಚಿತ್ರಾ, ಪಶು ವೈದ್ಯಾಧಿಕಾರಿ ಡಾ.ಗಣಪತಿ ರಾವ್,ಪೂಜಾ, ನಿರ್ದೇಶಕರಾದ ಶಿವ ಭಟ್, ಶಶಿಧರ ಶೆಟ್ಟಿ, ಪ್ರಶಾಂತ್ ವೇಗಸ್, ಆನಂದ ಮಡಿವಾಳ, ಗಣೇಶ್ ದೇವಾಡಿಗ, ಸುರೇಶ್ ಕುಲಾಲ್, ಗಿರಿಜಾ, ಪುಷ್ಪಾವತಿ, ಲಲಿತಾ, ಸುನಂದ ಉಪಸ್ಥಿತರಿದ್ದರು. ನಿರ್ದೇಶಕ ಶಿವ ಭಟ್ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಫ್ರೇಡ್ ಫೆರ್ನಾಂಡೀಸ್ ವರದಿ ಸಾಲಿನ ಲೆಕ್ಕಪತ್ರ ಮಂಡಿಸಿದರು. ಸಂಘದ ಸದಸ್ಯರಿಗೆ 65% ಬೋನಸ್ ಹಾಗೂ 25% ಡಿವಿಡೆಂಡ್ ಘೋಷಣೆ ಮಾಡಲಾಯಿತು.ದ್ವೀತಿಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಸದಸ್ಯ ಲಾರೆನ್ಸ್ ಪೀರೆರಾ ಅವರ ಮೂರು ದನಗಳು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವೀಗಿಡಾಗಿದ್ದು ಅವರಿಗೆ 40 ಸಾವಿರ ಮೊತ್ತದ ಚೆಕ್ ವಿತರಿಸಲಾಯಿತು.